alex Certify
ಕನ್ನಡ ದುನಿಯಾ       Mobile App
       

Kannada Duniya

ಶಮಿ ಪ್ರಕರಣಕ್ಕೆ ಹೊಸ ಟ್ವಿಸ್ಟ್: ಪಾಕಿಸ್ತಾನಿ ಹುಡುಗಿ ಹೇಳಿದ್ದೇನು…?

ಭಾರತ ಕ್ರಿಕೆಟ್ ತಂಡದ ಆಟಗಾರ ಮೊಹಮ್ಮದ್ ಶಮಿ ಹಾಗೂ ಪತ್ನಿ ಹಸೀನ್ ಮಧ್ಯೆ ನಡೆಯುತ್ತಿರುವ ವಿವಾದ ಸದ್ಯಕ್ಕೆ ನಿಲ್ಲುವಂತೆ ಕಾಣ್ತಿಲ್ಲ. ವಿವಾದಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಪಾಕಿಸ್ತಾನದ ಹುಡುಗಿ ಅಲಿಶಬಾ ಶಮಿ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾಳೆ.

ಹಸೀನ್ ಪತಿ ಶಮಿ ಹಾಗೂ ಅಲಿಶಬಾ ಮಧ್ಯೆ ಸಂಬಂಧವಿದೆ ಎಂದು ಆರೋಪ ಹೊರಿಸಿದ್ದಾರೆ. ಇದಕ್ಕೆ ಅಲಿಶಬಾ ಪ್ರತಿಕ್ರಿಯೆ ನೀಡಿದ್ದಾಳೆ. ಹನೀನ್ ಆರೋಪವನ್ನು ತಳ್ಳಿ ಹಾಕಿದ್ದಾಳೆ. ಶಮಿ ಹಾಗೂ ನಾನು ದುಬೈನಲ್ಲಿ ಒಮ್ಮೆ ಭೇಟಿಯಾಗಿದ್ದು ನಿಜ. ಆದ್ರೆ ಅದು ಸಾಮಾನ್ಯ ಭೇಟಿಯಾಗಿತ್ತು ಎಂದಿರುವ ಅಲಿಶಾಬಾ ನಮ್ಮಿಬ್ಬರ ಮಧ್ಯೆ ಯಾವುದೇ ಹಣದ ವ್ಯವಹಾರ ನಡೆದಿಲ್ಲವೆಂದೂ ಸ್ಪಷ್ಟನೆ ನೀಡಿದ್ದಾಳೆ.

ಟಿವಿ ಚಾನೆಲ್ ಒಂದರಲ್ಲಿ ಮಾತನಾಡಿದ ಅಲಿಶಬಾ, ನಾನು ಆಗಾಗ ದುಬೈಗೆ ಬರ್ತಿರುತ್ತೇನೆ. ಶಮಿ ಅಭಿಮಾನಿ ನಾನು. ಅವಕಾಶ ಸಿಕ್ಕಿದ್ದರಿಂದ ಖುಷಿಯಾಗಿ ಅವರನ್ನು ಭೇಟಿಯಾಗಿದ್ದೆ. ಅದ್ರಲ್ಲಿ ತಪ್ಪೇನಿದೆ. ಇದೊಂದು ದೊಡ್ಡ ವಿಷ್ಯವಲ್ಲ ನನ್ನ ಪ್ರಕಾರ ಎಂದಿದ್ದಾಳೆ. ಸಾಮಾನ್ಯ ಭೇಟಿ ನಂತ್ರ ನಾವಿಬ್ಬರೂ ಸ್ನೇಹಿತರಾದೆವು. ಎಲ್ಲ ಅಭಿಮಾನಿಗಳಂತೆ ನಾನು ಶಮಿಗೆ ಮೆಸ್ಸೇಜ್ ಕಳುಹಿಸುತ್ತಿದ್ದೆ ಎಂದಿದ್ದಾಳೆ ಅಲಿಶಬಾ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...