alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಹಮ್ಮದ್ ಶಮಿ ಪತ್ನಿಯ ಮೊದಲ ಪತಿ ಹೇಳಿದ್ದೇನು…?

ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಹಾಗೂ ಪತ್ನಿ ಹಸೀನ್ ಜಹಾಂ ನಡುವಣ ಜಟಾಪಟಿ ದಿನೇ ದಿನೇ ತೀವ್ರಗೊಳ್ಳುತ್ತಲೇ ಇದೆ. ಶಮಿಗೆ ಅಕ್ರಮ ಸಂಬಂಧ ಇದೆ ಅಂತಾ ಹಸೀನ್ ಗಂಭೀರ ಆರೋಪ ಮಾಡಿದ್ದಾಳೆ. ಅಷ್ಟೇ ಅಲ್ಲ ಮ್ಯಾಚ್ ಫಿಕ್ಸಿಂಗ್ ಆರೋಪವನ್ನೂ ಹೊರಿಸಿದ್ದಾಳೆ.

ಈಗಾಗ್ಲೇ ಶಮಿ ಮತ್ತವರ ಕುಟುಂಬಸ್ಥರ ವಿರುದ್ಧ ಎಫ್ ಐ ಆರ್ ಕೂಡ ದಾಖಲಾಗಿದೆ. ಹಸೀನ್ ಜಹಾಂಗೆ ಇದು ಎರಡನೇ ಮದುವೆ. ಮೊದಲ ಪತಿಯಿಂದ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮಕ್ಕಳು, ಮೊದಲ ಪತಿ ಎಸ್.ಕೆ. ಸೈಫುದ್ದೀನ್ ಜೊತೆಗಿರ್ತಾರೆ.

ವಾರಕ್ಕೆ ಎರಡು ಮೂರು ಬಾರಿ ಹಸೀನ್ ಮಕ್ಕಳೊಂದಿಗೆ ಫೋನ್ ನಲ್ಲಿ ಮಾತನಾಡ್ತಾಳಂತೆ. ಒಬ್ಬಳು 10ನೇ ತರಗತಿ ಹಾಗೂ ಇನ್ನೊಬ್ಬ ಮಗಳು 6ನೇ ತರಗತಿ ಓದ್ತಿದ್ದಾರೆ. ಸೈಫುದ್ದೀನ್ ಹಾಗೂ ಹಸೀನ್ ದು ಲವ್ ಮ್ಯಾರೇಜ್. 2002ನೇ ಇಸ್ವಿಯಲ್ಲಿ ಮದುವೆಯಾಗಿದ್ದ ಅವರು 2010ರಲ್ಲಿ ವಿಚ್ಛೇದನ ಪಡೆದಿದ್ದರು.

ಆಕೆ ತನ್ನ ಕಾಲ ಮೇಲೆ ತಾನು ನಿಲ್ಲಬೇಕೆಂಬ ಆಸೆಯಿತ್ತು. ವಿನಾಕಾರಣ ನನ್ನೊಂದಿಗೆ ಜಗಳ ಮಾಡುತ್ತಿದ್ಲು. ಆಕೆ ತನ್ನಿಂದ ಯಾವ ಕಾರಣಕ್ಕೆ ದೂರವಾದ್ಲು ಅನ್ನೋದೇ ಗೊತ್ತಿಲ್ಲ ಎನ್ನುತ್ತಾರೆ ಸೈಫುದ್ದೀನ್. ಚಿಕ್ಕದೊಂದು ಅಂಗಡಿ ಇಟ್ಟುಕೊಂಡು ಬದುಕು ಸಾಗಿಸ್ತಿದ್ದಾರೆ. ಹಸೀನ್ ಜಹಾಂಳ ವೈಯಕ್ತಿಕ ಬದುಕಿನ ಬಗ್ಗೆ ಯಾವುದೇ ಆಸಕ್ತಿಯಿಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...