alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ವಿಟ್ಟರ್ ನಲ್ಲಿ ಮತ್ತೊಮ್ಮೆ ಟ್ರೋಲ್ ಗೆ ತುತ್ತಾದ ಶಮಿ

shami

ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿಗೆ ಟ್ವಿಟ್ಟರ್ ನಲ್ಲಿ ಟ್ರೋಲ್ ಕಾಟ ಜಾಸ್ತಿಯಾಗ್ತಿದೆ. ಪತ್ನಿಯ ಫೋಟೋವನ್ನು ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಕ್ಕೆ ಕೆಲವರು ಆಕ್ಷೇಪಿಸಿದ್ರು. ಮಗಳ ಬರ್ತಡೇ ಫೋಟೋ ಹಾಕಿದ್ದು ಕೂಡ ತಪ್ಪು ಎಂದಿದ್ರು. ಆದ್ರೆ ಶಮಿ ಮಾತ್ರ ಟ್ರೋಲ್ ಗಳಿಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ.

ಪ್ರಸಿದ್ಧ ಹಿಂದು ಪುರಾಣ ರಾಮಾಯಣಕ್ಕೆ ಸಂಬಂಧಪಟ್ಟ ಪವಿತ್ರ ಕ್ಷೇತ್ರಕ್ಕೆ ಶಮಿ ಭೇಟಿ ನೀಡಿರುವುದು ಹಲವರ ಕೆಂಗಣ್ಣಿಗೆ ತುತ್ತಾಗಿದೆ. ಶಮಿ ಮತ್ತು ಸಹ ಆಟಗಾರರು ಶ್ರೀಲಂಕಾದಲ್ಲಿರುವ ಅಶೋಕ್ ವಟಿಕಾಗೆ ಭೇಟಿ ನೀಡಿದ್ರು. ರಾವಣ ಸೀತೆಯನ್ನು ಅಪಹರಿಸಿ ಅಶೋಕ್ ವಟಿಕಾದಲ್ಲೇ ತಂದಿಟ್ಟಿದ್ದ ಎಂಬ ಪ್ರತೀತಿ ಇದೆ.

ಅಶೋಕ್ ವಟಿಕಾಗೆ ಭೇಟಿ ನೀಡಿದ್ದ ಫೋಟೋಗಳನ್ನು ಶಮಿ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದರು. ಶುಕ್ರವಾರ ಹಿಂದುಗಳ ಪವಿತ್ರ ಸ್ಥಳಕ್ಕೆ ತೆರಳಿದ್ದಾರೆ ಅಂತಾ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಸೀತೆಗೆ, ಸೀತಾ ಮಾತೆ ಅಂತಾ ಕರೆಯಬೇಕು ಅಂತಾ ಒತ್ತಾಯಿಸಿದ್ದಾರೆ. ಇನ್ನೊಂದಷ್ಟು ಮಂದಿ ಶಮಿಯನ್ನು ಮೆಚ್ಚಿಕೊಂಡಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...