alex Certify
ಕನ್ನಡ ದುನಿಯಾ       Mobile App
       

Kannada Duniya

“ಶಮಿಗೆ ಐಪಿಎಲ್ ನಲ್ಲಿ ಅವಕಾಶ ನೀಡಬೇಡಿ’’

ಕ್ರಿಕೆಟರ್ ಮೊಹಮ್ಮದ್ ಶಮಿ ಪತ್ನಿ ಹಸೀನ್ ಡೆಲ್ಲಿ ಡೇರ್ ಡೇವಿಲ್ಸ್ ತಂಡದ ಸಿಇಒ ಹೇಮಂತ್ ದುವಾರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ವರದಿ ಪ್ರಕಾರ, ಶಮಿಗೆ ಐಪಿಎಲ್ ನಲ್ಲಿ ಅವಕಾಶ ನೀಡಬೇಡಿ ಎಂದು ಹಸೀನ್ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಕುಟುಂಬದ ವಿವಾದ ಬಗೆಹರಿಯುವವರೆಗೆ ಐಪಿಎಲ್ ನಲ್ಲಿ ಆಡಲು ಅವಕಾಶ ನೀಡಬೇಡಿ ಎಂದು ಹೇಮಂತ್ ಸರ್ ಗೆ ಮನವಿ ಮಾಡಿದ್ದೇನೆ. ನನ್ನ ಬೇಡಿಕೆಯನ್ನು ಅವರ ಮುಂದಿಟ್ಟಿದ್ದೇನೆ ಎಂದು ಹಸೀನ್ ಹೇಳಿದ್ದಾಳೆ.

ಮಾರ್ಚ್ 7 ರಂದು ಶಮಿ ಪತ್ನಿ ಹಸೀನ್ ಮೊದಲು ಫೇಸ್ಬುಕ್ ನಲ್ಲಿ ಶಮಿ ವಿರುದ್ಧ ಅಕ್ರಮ ಸಂಬಂಧದ ಆರೋಪ ಹೊರಿಸಿದ್ದರು. ನಂತ್ರ ಮಾಧ್ಯಮಗಳ ಮುಂದೆ ಮಾತನಾಡಿದ್ರು. ಆ ನಂತ್ರ ಕೋಲ್ಕತ್ತಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಶಮಿ ವಿರುದ್ಧ ಕೌಟುಂಬಿಕ ಹಲ್ಲೆ, ಕೊಲೆ ಯತ್ನ ಸೇರಿದಂತೆ ಅನೇಕ ದೂರು ದಾಖಲಾಗಿದೆ. ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಐಪಿಎಲ್ ಆವೃತ್ತಿ 11ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪರ ಶಮಿ ಮೈದಾನಕ್ಕಿಳಿಯಲಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...