alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಗೆ ಮುಖಭಂಗ, ಶಮಿಗೆ ಕ್ಲೀನ್ ಚಿಟ್ ನೊಂದಿಗೆ ಭರ್ಜರಿ ಗಿಫ್ಟ್

ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಒಳಗಾಗಿದ್ದ ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿಗೆ ಬಿಗ್ ರಿಲೀಫ್ ಸಿಕ್ಕಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ಭ್ರಷ್ಟಾಚಾರ ನಿಗ್ರಹ ದಳದ ವತಿಯಿಂದ ತನಿಖೆ ನಡೆಸಿ ಶಮಿಗೆ ಕ್ಲೀನ್ ಚಿಟ್ ನೀಡಲಾಗಿದೆ.

ಶಮಿ ಹಾಗೂ ಅವರ ಪತ್ನಿ ಹಸಿನ್ ಜಹಾನ್ ಜಗಳ ಹಾದಿ ರಂಪ, ಬೀದಿ ರಂಪವಾಗಿದೆ. ಶಮಿ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿದ್ದ ಪತ್ನಿ, ಬುಕ್ಕಿಯಿಂದ ಜಿಪ್ಸಿಯನ್ನು ಉಡುಗೊರೆಯಾಗಿ ಪಡೆದಿರುವುದಾಗಿ ಆರೋಪ ಮಾಡಿದ್ದರು.

ಬುಕ್ಕಿ ಮೊಹಮ್ಮದ್ ಭಾಯ್ ಅವರನ್ನು ಭೇಟಿ ಮಾಡಿ ಮ್ಯಾಚ್ ಫಿಕ್ಸಿಂಗ್ ಗಾಗಿ ಉಡುಗೊರೆ ಪಡೆದಿದ್ದರು ಎಂದು ಅವರು ಹೇಳಿದ್ದರು.

ಈ ಕುರಿತಾಗಿ ತನಿಖೆ ನಡೆಸಿದ ಬಿ.ಸಿ.ಸಿ.ಐ. ಭ್ರಷ್ಟಾಚಾರ ನಿಗ್ರಹ ವಿಭಾಗ, ಶಮಿಗೆ ಕ್ಲೀನ್ ಚಿಟ್ ನೀಡಿದೆ. ಶಮಿ ಮೇಲಿನ ಮ್ಯಾಚ್ ಫಿಕ್ಸಿಂಗ್ ಆರೋಪಗಳಿಗೆ ಪುರಾವೆಗಳಿಲ್ಲ ಎಂದು ದೆಹಲಿ ಮಾಜಿ ಪೊಲೀಸ್ ಕಮಿಷನರ್ ಹಾಗೂ ಬಿ.ಸಿ.ಸಿ.ಐ. ಭ್ರಷ್ಟಾಚಾರ ನಿಗ್ರಹ ವಿಭಾಗದ ಮುಖ್ಯಸ್ಥ ನೀರಜ್ ಕುಮಾರ್ ತಿಳಿಸಿದ್ದಾರೆ.

ಇದರೊಂದಿಗೆ ಶಮಿಗೆ ಬಿ.ಸಿ.ಸಿ.ಐ. ಶಮಿ ಅವರನ್ನು ಬಿ ಗ್ರೇಡ್ ಆಟಗಾರನಾಗಿ ಸೇರಿಸಿಕೊಂಡಿದ್ದು, ವಾರ್ಷಿಕ 3 ಕೋಟಿ ರೂ. ವೇತನ ನೀಡಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...