alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಸಿಸಿಐ ಕಾಂಟ್ರಾಕ್ಟ್ ಗಾಗಿ ತಪ್ಪೊಪ್ಪಿಕೊಂಡ್ರಾ ಮೊಹಮ್ಮದ್ ಶಮಿ?

ಮೊಹಮ್ಮದ್ ಶಮಿ ವಿರುದ್ಧದ ಮ್ಯಾಚ್ ಫಿಕ್ಸಿಂಗ್ ಆರೋಪದ ಬಗ್ಗೆ ತನಿಖೆ ನಡೆಸಿದ ಬಿಸಿಸಿಐ ಭ್ರಷ್ಟಾಚಾರ ವಿರೋಧಿ ಘಟಕ, ವೇಗದ ಬೌಲರ್ ಗೆ ಕ್ಲೀನ್ ಚಿಟ್ ನೀಡಿದೆ. ಇದರ ಬೆನ್ನಲ್ಲೇ ಶಮಿಗೆ ಬಿಸಿಸಿಐನಿಂದ ವಾರ್ಷಿಕ 3 ಕೋಟಿ ರೂ. ವೇತನದ ಕಾಂಟ್ರಾಕ್ಟ್ ಕೂಡ ಸಿಕ್ಕಿದೆ.

ಆದ್ರೆ ಬಿಸಿಸಿಐ ಒಪ್ಪಂದವನ್ನು ಪಡೆದುಕೊಳ್ಳಲು ಶಮಿ, ತಮಗೆ ಅಕ್ರಮ ಸಂಬಂಧ ಇರುವುದಾಗಿ ಒಪ್ಪಿಕೊಂಡಿದ್ದಾರೆ ಅಂತಾ ಹೇಳಲಾಗ್ತಿದೆ. ಬಿಸಿಸಿಐ ಕೇವಲ ಶಮಿ ವಿರುದ್ಧದ ಮ್ಯಾಚ್ ಫಿಕ್ಸಿಂಗ್ ಬಗ್ಗೆ ತನಿಖೆ ನಡೆಸಿದೆ, ಅವರ ಖಾಸಗಿ ವಿಚಾರಕ್ಕೂ ಕ್ರಿಕೆಟ್ ಮಂಡಳಿಗೂ ಸಂಬಂಧವಿಲ್ಲ ಅಂತಾ ತನಿಖಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಆದ್ರೆ ನೀರಜ್ ಕುಮಾರ್ ನೇತೃತ್ವದ ತನಿಖಾ ತಂಡದ ಎದುರು ಶಮಿ ತಮಗೆ ಅಕ್ರಮ ಸಂಬಂಧವಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗ್ತಿದೆ. ದಕ್ಷಿಣ ಆಫ್ರಿಕಾ ಸರಣಿ ಬಳಿಕ ಶಮಿ ದುಬೈನಲ್ಲಿ 2 ದಿನ ಇದ್ದರು ಅನ್ನೋದನ್ನು ಬಿಸಿಸಿಐ ಈಗಾಗ್ಲೇ ಖಚಿತಪಡಿಸಿದೆ.

ಶಮಿ ಅಲ್ಲಿ ಸ್ನೇಹಿತೆಯರ ಜೊತೆಗೆ ಕಾಲ ಕಳೆದಿದ್ದಾರೆ ಎನ್ನಲಾಗ್ತಿದೆ. ಆದ್ರೆ ಶಮಿ ಬ್ಯಾಂಕ್ ಖಾತೆಯನ್ನೆಲ್ಲ ಅಧಿಕಾರಿಗಳು ಜಾಲಾಡಿದ್ದಾರೆ. ಯಾವುದೇ ರೀತಿಯ ಅನುಮಾನಾಸ್ಪದ ವಹಿವಾಟು ನಡೆದಿಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...