alex Certify
ಕನ್ನಡ ದುನಿಯಾ       Mobile App
       

Kannada Duniya

ವಿಡಿಯೋ ಕ್ಯಾಮರಾ ಒಡೆದ ಮೊಹಮ್ಮದ್ ಶಮಿ ಪತ್ನಿ

ಭಾರತ ಕ್ರಿಕೆಟ್ ತಂಡದ ಆಟಗಾರ ಮೊಹಮ್ಮದ್ ಶಮಿ ಪತ್ನಿ ಹಸೀನ್ ಕೋಲ್ಕತ್ತಾದಲ್ಲಿ ಮಾಧ್ಯಮಗಳ ಮೇಲೆ ದರ್ಪ ತೋರಿದ್ದಾರೆ. ಮಾಧ್ಯಮದವರನ್ನು ನೋಡಿ ಕೋಪಗೊಂಡ ಹಸೀನ್ ವಿಡಿಯೋ ಕ್ಯಾಮರಾ ಒಂದನ್ನು ಒಡೆದು ಹಾಕಿದ್ದಾರೆ.

ಘಟನೆ ಮಂಗಳವಾರ ನಡೆದಿದೆ. ಹಸೀನ್ ಕೋಲ್ಕತ್ತಾದ ಸೇಂಟ್ ಸ್ಟೀಫನ್ ಸ್ಕೂಲಿಗೆ ಬಂದಿದ್ದರು. ಈ ವೇಳೆ ಮಾಧ್ಯಮಗಳು ಕಣ್ಣಿಗೆ ಬಿದ್ದಿವೆ. ಮಾಧ್ಯಮದವರನ್ನು ನೋಡಿ ಕೂಗಿಕೊಂಡ ಹಸೀನ್ ವಿಡಿಯೋ ಕ್ಯಾಮರಾವೊಂದನ್ನು ಒಡೆದು ಹಾಕಿದ್ದಾರೆ. ಇದಾದ ನಂತ್ರ ಎಸ್ಯುವಿ ಕಾರ್ ನಲ್ಲಿ ಕುಳಿತು ಮನೆಗೆ ಹೋಗಿದ್ದಾರೆ ಎನ್ನಲಾಗಿದೆ.

ಹಸೀನ್ ಹಾಗೂ ಮೊಹಮ್ಮದ್ ಶಮಿ ಗಲಾಟೆ ಈಗ ಚರ್ಚೆಯ ವಿಷ್ಯವಾಗಿದೆ. ನಾಲ್ಕು ಕೋಣೆಯೊಳಗಿರಬೇಕಿದ್ದ ಜಗಳ ಬೀದಿ ರಂಪಾಟಕ್ಕೆ ಕಾರಣವಾಗಿದೆ. ಮೊಹಮ್ಮದ್ ಶಮಿ ಈಗಾಗಲೇ ಇದೆಲ್ಲ ಸುಳ್ಳು ಎಂದಿದ್ದಾರೆ. ಸದ್ಯದಲ್ಲಿಯೇ ಶಮಿ ವಿಚಾರಣೆ ನಡೆಯುವ ಸಾಧ್ಯತೆಯಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...