alex Certify
ಕನ್ನಡ ದುನಿಯಾ       Mobile App
       

Kannada Duniya

ಶಮಿ ಪ್ರಕರಣಕ್ಕೆ ಹೊಸ ಟ್ವಿಸ್ಟ್: ಪತ್ನಿ ಮೋಸ ಬಿಚ್ಚಿಟ್ಟ ಕ್ರಿಕೆಟರ್

ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ಹಾಗೂ ಪತ್ನಿ ಹಸೀನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ವಿಷ್ಯವೊಂದು ಬಹಿರಂಗವಾಗಿದೆ. ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ ಶಮಿ, ಪತ್ನಿ ಹಸೀನ್ ಮೋಸವನ್ನು ಬಯಲು ಮಾಡಿದ್ದಾರೆ.

ಮೊಹಮ್ಮದ್ ಶಮಿ, ಹಸೀನ್ ಮದುವೆಯಾದ ಮೇಲೆ ಹಸೀನ್ ಗೆ ಈ ಹಿಂದೆಯೇ ಮದುವೆಯಾಗಿತ್ತು ಹಾಗೂ ಇಬ್ಬರು ಮಕ್ಕಳಿದ್ದಾರೆಂಬ ಸಂಗತಿ ಗೊತ್ತಾಗಿದೆಯಂತೆ. ಮದುವೆಗೆ ಮುನ್ನ ಈ ಸತ್ಯ ಗೊತ್ತಿರಲಿಲ್ಲವಂತೆ. ನಿಧಾನವಾಗಿ ಹಸೀನ್ ಎಲ್ಲ ಸಂಗತಿಯನ್ನು ನನಗೆ ಹೇಳಿದ್ದಳು. ಮದುವೆ ವೇಳೆ ತನ್ನೆರಡು ಮಕ್ಕಳನ್ನು ಸಹೋದರಿ ಮಕ್ಕಳು ಎಂದು ಪರಿಚಯಿಸಿದ್ದಳು ಎಂದು ಶಮಿ ಹೇಳಿದ್ದಾರೆ.

ಈವರೆಗೂ ನನ್ನ ಕುಟುಂಬದವರು ಮಕ್ಕಳನ್ನು ಹಸೀನ್ ಸಹೋದರಿ ಮಕ್ಕಳು ಎಂದೇ ತಿಳಿದಿದ್ದರು. ಆದ್ರೀಗ ಸತ್ಯ ಜಗತ್ತಿಗೆ ಗೊತ್ತಾಗಿದೆ ಎಂದು ಶಮಿ ಹೇಳಿದ್ದಾರೆ. 2014ರಲ್ಲಿ ಶಮಿ-ಹಸೀನ್ ಮದುವೆ ನೆರವೇರಿತ್ತು. ಹಸೀನ್ ಕೋಲ್ಕತ್ತಾ ನೈಟ್ ರೈಡರ್ಸ್ ನ ಚಿಯರ್ ಲೀಡರ್ ಆಗಿದ್ದರು. ಈ ವೇಳೆ ಶಮಿ, ಹಸೀನ್ ಪ್ರೀತಿಗೆ ಬಿದ್ದಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...