alex Certify
ಕನ್ನಡ ದುನಿಯಾ       Mobile App
       

Kannada Duniya

ಕೀಪಿಂಗ್ ಯಶಸ್ಸಿನ ಗುಟ್ಟು ಬಿಚ್ಚಿಟ್ಟ ಅಫ್ಘಾನ್ ಆಟಗಾರ

ಶುಕ್ರವಾರ ರಾತ್ರಿ ಅಬುದಾಬಿಯಲ್ಲಿ ನಡೆದ ಪಾಕಿಸ್ತಾನ-ಅಫ್ಘಾನಿಸ್ತಾನ ನಡುವಿನ ಏಷ್ಯಾ ಕಪ್ ಪಂದ್ಯದಲ್ಲಿ ಸ್ಟಂಪ್ ಮಾಡಿದ ಅಫ್ಘಾನ್ ವಿಕೆಟ್ ಕೀಪರ್ ಮೊಹಮ್ಮದ್ ಸಹಜಾದ್ ಗೆ ಮಹಿ ಪ್ರೇರಣೆಯಂತೆ.

ಶುಕ್ರವಾರದ ಪಂದ್ಯದಲ್ಲಿ ಉತ್ತಮ ರೀತಿಯಲ್ಲಿ ಬ್ಯಾಟ್ ಮಾಡುತ್ತಿದ್ದ ಪಾಕಿಸ್ತಾನದ ಬಾಬರ್ ಅವರನ್ನು ರಶೀದ್ ಖಾನ್ ಅವರ ಓವರ್ ನಲ್ಲಿ‌ ಕ್ಷಣಮಾತ್ರದಲ್ಲಿ‌ ಸ್ಟಂಪ್‌ ಬಲೆಗೆ ಕೆಡವಿದ, ಸಹಜಾದ್ ಅವರಿಗೆ ಭಾರತದ ಹಿರಿಯ‌ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿಯೇ ಪ್ರೇರಣೆಯಂತೆ. ಅವರನ್ನು ನೋಡಿಕೊಂಡು ಕ್ರಿಕೆಟ್ ಕಲಿತ್ತಿದ್ದಾರಂತೆ.

ಹೀಗೆಂದು ಹೇಳಿಕೊಂಡಿರುವುದು ಸ್ವತಃ ಸಹಜಾದ್ ಅವರೇ. ಪಂದ್ಯದ ಬಳಿಕ ಮಾತನಾಡಿರುವ ಅವರು, ಅನೇಕ ಯುವ ಕ್ರಿಕೆಟಿಗರಂತೆ ನಾನೂ ಸಹ ಧೋನಿ ಅವರ ಆಟವನ್ನು ಕಣ್ತುಂಬಿಕೊಳ್ಳುತ್ತಿದ್ದೆ. ಧೋನಿ ಆಟ ನೋಡಲೆಂದು ಒಮ್ಮೆ ಊಟ ಬಿಟ್ಟಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಇನ್ನು ಭಾರತದ ನಡುವಿನ ಪ್ರತಿ ಪಂದ್ಯದ ಬಳಿಕ ಧೋನಿ ಅವರ ಕೋಣೆಗೆ ಹೋಗಿ ಗಂಟೆಗಟ್ಟಲೇ ಮಾತನಾಡುತ್ತೇನೆ. ಈ ವೇಳೆ ಕ್ರಿಕೆಟ್ ಮಾತನ್ನು ಬಿಟ್ಟು, ಆಫ್ಘಾನಿಸ್ತಾನ ಹಾಗೂ ನಮ್ಮ ಕುಟುಂಬದ ಬಗ್ಗೆ ಮಾತನಾಡುತ್ತೇವೆ‌. ಆದರೆ ಮಹಿಯನ್ನು ಮೊಬೈಲ್ ನಲ್ಲಿ ಮಾತನಾಡಿಸುವುದು ಕಷ್ಟದ ವಿಚಾರ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...