alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಣ್ಣು ಮಗುವಿಗೆ ತಂದೆಯಾದ ಕೈಫ್

kaif_yj2c8rv

ಭಾರತದ ಮಾಜಿ ಕ್ರಿಕೆಟ್ ಆಟಗಾರ ಮೊಹಮ್ಮದ್ ಕೈಫ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಕೈಫ್ ಮನೆಗೆ ಮುದ್ದಾದ ಹೆಣ್ಣು ಮಗವೊಂದು ಬಂದಿದೆ. ಕೈಫ್ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಮಂಗಳವಾರ ಕೈಫ್ ಪತ್ನಿ ಪೂಜಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಈ ವಿಷಯವನ್ನು ಕೈಫ್ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದರು.

ಕೈಫ್ ಗೆ ಈಗಾಗಲೇ ಐದು ವರ್ಷದ ಗಂಡು ಮಗನಿದ್ದಾನೆ. ನಮ್ಮ ಮನೆಗೆ ಹೊಸ ಅತಿಥಿ ಬಂದಿದ್ದು, ಪೂಜಾ ಆರೋಗ್ಯಕರ, ಸುಂದರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆಂದು ಕೈಫ್ ಟ್ವಿಟ್ ಮಾಡಿದ್ದರು.

ಕೈಫ್ ಟ್ವಿಟ್ ನಂತ್ರ ಅಭಿನಂದನೆಗಳ ಸುರಿಮಳೆಯೇ ಹರಿದು ಬರ್ತಾ ಇದೆ. ಸಚಿನ್ ತೆಂಡೂಲ್ಕರ್, ಹರ್ಭಜನ್ ಸಿಂಗ್, ಅನಿಲ್ ಕುಂಬ್ಳೆ, ಆರ್.ಪಿ.ಸಿಂಗ್, ಆಕಾಶ್ ಚೋಪ್ರಾ ಸೇರಿದಂತೆ ಅನೇಕರು ವಿಶ್ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...