alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿ ಬೆಂಬಲಕ್ಕೆ ನಿಂತ ಮೊಹಮ್ಮದ್ ಕೈಫ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದೇಶ ಬಿಡಿ ಎಂಬ ವಿವಾದಾತ್ಮಕ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ಟ್ರೋಲರ್ ಬಾಯಿಗೆ ಆಹಾರವಾಗಿದೆ. ಕೊಹ್ಲಿ ವಿರುದ್ಧ ಕೇಳಿ ಬರ್ತಿರುವ ಕಮೆಂಟ್ ಗೆ ವಿರಾಟ್ ಪ್ರತ್ಯುತ್ತರ ಕೂಡ ನೀಡಿದ್ದಾರೆ. ಟ್ವೀಟರ್ ನಲ್ಲಿ ತಮ್ಮ ಹೇಳಿಕೆಯನ್ನು ಕೊಹ್ಲಿ ಸಮರ್ಥಿಸಿಕೊಂಡಿದ್ದರು. ಈಗ ಕೊಹ್ಲಿ ಪರ ಮಾಜಿ ಕ್ರಿಕೆಟರ್ ಮೊಹಮ್ಮದ್ ಕೈಫ್ ಬ್ಯಾಟ್ ಬೀಸಿದ್ದಾರೆ.

ಮೊಹಮ್ಮದ್ ಕೈಫ್ ಟ್ವಿಟ್ ಮಾಡಿದ್ದಾರೆ. ವಿರಾಟ್ ಕೊಹ್ಲಿ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ವಿರಾಟ್ ಒಂದು ಸನ್ನಿವೇಶದಲ್ಲಿ ಈ ಹೇಳಿಕೆ ನೀಡಿದ್ದರು. ಆದ್ರೆ ಅದನ್ನು ತಪ್ಪಾಗಿ ಪ್ರಸ್ತುತಪಡಿಸಲಾಗ್ತಿದೆ. ಇತ್ತೀಚಿನ ದಿನಗಳಲ್ಲಿ ಕಾರಣವಿಲ್ಲದೆ ಎಲ್ಲರನ್ನೂ ಟ್ರೋಲ್ ಮಾಡಲಾಗ್ತಿದೆ. ಇದೊಂದು ಟ್ರೆಂಡ್ ಎಂದು ಕೈಫ್ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಆಪ್ ಅಕ್ಟೋಬರ್ 30ರಂದು ಪ್ರಾರಂಭವಾಗಿದೆ. ಆಪ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಲಾಗಿತ್ತು. ಅಭಿಮಾನಿ, ಪ್ರಸ್ತುತ ಭಾರತೀಯ ಆಟಗಾರರಿಗಿಂತ ಆಸ್ಟ್ರೇಲಿಯಾ, ಇಂಗ್ಲೆಂಡ್ ನ ಆಟಗಾರರನ್ನು ಹೆಚ್ಚು ಇಷ್ಟಪಡ್ತಾರೆಂದು ಹೇಳಿದ್ದ. ಇದಕ್ಕೆ ವಿರಾಟ್, ಭಾರತದ ಬದಲು ಬೇರೆ ದೇಶದಲ್ಲಿ ವಾಸವಾಗಬಹುದಿತ್ತು ಎಂದಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...