alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ಬೌಲರ್ ಪ್ರಕಾರ ಯಾರನ್ನು ಔಟ್ ಮಾಡೋದು ಕಷ್ಟವಂತೆ ಗೊತ್ತಾ?

ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅಂದ್ರೆ ಬೌಲರ್ ಗಳಿಗೆ ಒಂಥರಾ ಭಯ. ಟೆಸ್ಟ್, ಏಕ ದಿನ ಪಂದ್ಯ, ಟಿ- 20 ಸೇರಿದಂತೆ ಕ್ರಿಕೆಟ್ ನ ಎಲ್ಲಾ ಫಾರ್ಮ್ ಗಳಲ್ಲೂ ಕೊಹ್ಲಿ ಬೌಲರ್ ಗಳನ್ನ ಧೂಳೀಪಟ ಮಾಡಿದ್ದಾರೆ.

ಆದ್ರೆ ಪಾಕಿಸ್ತಾನದ ವೇಗದ ಬೌಲರ್ ಮೊಹಮ್ಮದ್ ಅಮೀರ್ ಈ ವಿಚಾರದಲ್ಲಿ ತಮ್ಮ ಅಭಿಪ್ರಾಯವನ್ನು ಬದಲಿಸಿದ್ದಾರೆ.

ಸದ್ಯ ಮೊಹಮ್ಮದ್ ಅಮೀರ್, ಜಿಂಬಾಬ್ವೆ ವಿರುದ್ಧ ಟಿ- 20 ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ. ಪಂದ್ಯದ ವೇಳೆ ಯಾರಿಗೆ ಬೌಲಿಂಗ್ ಮಾಡೋದು ತುಂಬಾ ಕಷ್ಟದ ಕೆಲಸ ಅಂತ ಕೇಳಿದಾಗ ಅಮೀರ್, ವಿರಾಟ್ ಕೊಹ್ಲಿ ಹೆಸರು ಹೇಳಿಲ್ಲ. ಅಮೀರ್ ಹೇಳಿದ್ದು ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್ ಸ್ಟೀವನ್ ಸ್ಮಿತ್ ಹೆಸರು.

ಇದರಲ್ಲಿ ಶಾಕ್ ಆಗೋ ವಿಚಾರವೇನಿಲ್ಲ. ಅಮೀರ್, ವಿರಾಟ್ ಅವರನ್ನ ಕೆಲ ಪಂದ್ಯಗಳಲ್ಲಿ ಡಾಮಿನೇಟ್ ಮಾಡಿದ್ದಾನೆ. 2016ರ ಏಷ್ಯಾ ಕಪ್, ಕಳೆದ ವರ್ಷ ನಡೆದ ಚಾಂಪಿಯನ್ಸ್ ಟ್ರೋಫಿಗಳಲ್ಲಿ ವಿರಾಟ್ ಕೊಹ್ಲಿಯನ್ನ ಅಮೀರ್ ಔಟ್ ಮಾಡಿದ್ದರು. ಈ ಸಂಬಂಧ ಕೊಹ್ಲಿ ಕೂಡ ಅಮೀರ್ ನನಗೆ ಸವಾಲೆಸೆಯಬಲ್ಲ ಬೌಲರ್ ಅಂತ ಹೇಳಿದ್ದರು.

ಆನ್ ಫೀಲ್ಡ್ ನಲ್ಲಿ ಏನೇ ಕಿತ್ತಾಟಗಳಿದ್ದರು ಆಫ್ ಫೀಲ್ಡ್ ನಲ್ಲಿ ಕೊಹ್ಲಿ ಮತ್ತು ಅಮೀರ್ ನಡುವೆ ಗೆಳೆತನವಿತ್ತು. ಹಾಗಾಗಿ ಅಮೀರ್ ಕೂಡ ಕೊಹ್ಲಿ ಹೆಸರು ಹೇಳಬಹುದು ಅಂತಲೇ ಎಲ್ಲರು ಭಾವಿಸಿದ್ದರು. ಆದ್ರೆ ಅಮೀರ್ ಹೇಳಿದ್ದು ಸ್ಟೀವನ್ ಸ್ಮಿತ್ ಹೆಸರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...