alex Certify
ಕನ್ನಡ ದುನಿಯಾ       Mobile App
       

Kannada Duniya

“ಮಹಿಳಾ ಕ್ರಿಕೆಟ್ ಗೆ ಒಳ್ಳೆ ದಿನ ಶುರುವಾಗಿದೆ’’

mithali_1501059709_618x347

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಟೀಂ ಪ್ರದರ್ಶನದಿಂದ ಖುಷಿಯಾಗಿದ್ದಾರೆ. ವಿಶ್ವಕಪ್ ಫೈನಲ್ ನಲ್ಲಿ ಸೋಲುಂಡು ನೋವಿನಲ್ಲಿದ್ದ ತಂಡ ಈಗ ಚೇತರಿಸಿಕೊಂಡಿದೆ. ಮುಂಬೈಗೆ ಬಂದ ನಾಯಕಿ ಸುದ್ದಿಗೋಷ್ಠಿಯಲ್ಲಿ ತಮ್ಮ ಖುಷಿ ಹಂಚಿಕೊಂಡಿದ್ದಾರೆ.

ಮಾಧ್ಯಮದವರ ಜೊತೆ ಮಾತನಾಡಿದ ಮಿಥಾಲಿ, ಭಾರತೀಯ ಮಹಿಳಾ ಕ್ರಿಕೆಟ್ ಗೆ ಒಳ್ಳೆ ದಿನ ಶುರುವಾಗಿದೆ. 2013ರಲ್ಲಿ ನಡೆದ ವಿಶ್ವಕಪ್ ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದನ್ನು ತಂಡ ಮೆಟ್ಟಿ ನಿಂತಿದೆ. ಈ ಬಾರಿ ಟೀಂ ಸಾಕಷ್ಟು ಹಾರ್ಡ್ ವರ್ಕ್ ಮಾಡಿತ್ತು. ಅದ್ರ ಪ್ರತಿಫಲ ಎಲ್ಲರ ಮುಂದಿದೆ ಎಂದಿದ್ದಾರೆ.

ಇದೇ ವೇಳೆ ಮಾತನಾಡಿದ ಹರ್ಮನ್ ಪ್ರೀತ್ ಕೌರ್ 117 ರನ್ ಗಳಿಸಿದ ಕ್ಷಣವನ್ನು ನೆನೆದಿದ್ದಾರೆ. ತುಂಬಾ ಖುಷಿಯಲ್ಲಿದ್ದ ಕೌರ್, ದೇಶಿಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಆಡಿದ ಎಲ್ಲ ಪಂದ್ಯಗಳಲ್ಲಿ ಇದು ಹೆಚ್ಚು ರನ್ ಗಳಿಸಿದ ಪಂದ್ಯ. ನಾನು ಅಷ್ಟು ರನ್ ಗಳಿಸುವ ಅಗತ್ಯವಿತ್ತು. ಸಮಯಕ್ಕೆ ತಕ್ಕಂತೆ ಉತ್ತಮ ಆಟವಾಡಿದ್ದು, ನನಗೆ ಖುಷಿ ನೀಡಿದೆ ಎಂದಿದ್ದಾರೆ ಕೌರ್.

ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ನ ಮೂರು ವಿಕೆಟ್ ಕಬಳಿಸಿದ್ದ ಜೂಲನ್ ಗೋಸ್ವಾಮಿ ಕೂಡ ಮಾತನಾಡಿದ್ದಾರೆ. ಲಾರ್ಡ್ಸ್ ನಲ್ಲಿ ಆಟವಾಡುವುದು ಪ್ರತಿಯೊಬ್ಬ ಆಟಗಾರನ ಕನಸು. ಫೈನಲ್ ನಲ್ಲಿ ನನ್ನ ಕನಸು ಪೂರ್ತಿಯಾಯ್ತು. ಸ್ವಲ್ಪ ಒತ್ತಡವಿತ್ತು. ಆದ್ರೆ ಪಂದ್ಯವನ್ನು ಆನಂದಿಸಿದ್ದೇನೆಂದು ಗೋಸ್ವಾಮಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...