alex Certify
ಕನ್ನಡ ದುನಿಯಾ       Mobile App
       

Kannada Duniya

ಹಲ್ ಚಲ್ ಎಬ್ಬಿಸಿದೆ ಮಿಥಾಲಿರಾಜ್ ಡ್ರೆಸ್

ಬರ್ಲಿನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಎದುರು, ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಕಾಲು ಕಾಣಿಸುವ ಉಡುಪು ಧರಿಸಿದ್ದು ಭಾರೀ ವಿವಾದಕ್ಕೆ ಕಾರಣವಾಗಿ, ಪರ, ವಿರೋಧ ಅಭಿಪ್ರಾಯ ವ್ಯಕ್ತವಾಗಿತ್ತು.

ಈಗ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅವರ ಡ್ರೆಸ್ ಹಲ್ ಚಲ್ ಎಬ್ಬಿಸಿದೆ. ಬ್ಲಾಕ್ ಸ್ಪಾಗೆಟ್ಟಿ ಡ್ರೆಸ್ ನಲ್ಲಿ ಗೆಳತಿಯರೊಂದಿಗೆ ಮಿಥಾಲಿ ರಾಜ್ ತೆಗೆಸಿಕೊಂಡ ಫೋಟೋವನ್ನು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಫೋಟೋ ಪರ, ವಿರೋಧ ಚರ್ಚೆಗೆ ಕಾರಣವಾಗಿದೆ. ನಿಮ್ಮಿಂದ ಇಂತಹುದನ್ನು ನಿರೀಕ್ಷಿಸಿರಲಿಲ್ಲ. ನೀವು ಇಂತಹ ಡ್ರೆಸ್ ಧರಿಸಬಾರದಿತ್ತು ಎಂದು ಅನೇಕರು ಟೀಕಿಸಿದ್ದಾರೆ.

ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿಯಾಗಿರುವ ನೀವು ರೋಲ್ ಮಾಡೆಲ್, ಹೀಗೆಲ್ಲಾ ಡ್ರೆಸ್ ಹಾಕಬೇಡಿ ಎಂದು ಕೆಲವರು ಸಲಹೆ ನೀಡಿದ್ದಾರೆ.

ಇಂತಹ ಸಲಹೆ, ಟೀಕೆಗಳಿಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮಿಥಾಲಿ ರಾಜ್ ಅವರಿಗೆ ಇಷ್ಟವಾದ ಬಟ್ಟೆಗಳನ್ನು ಧರಿಸಲು ಸ್ವತಂತ್ರರಾಗಿದ್ದಾರೆ. ಅವರಿಗೂ ಜವಾಬ್ದಾರಿ ಇದೆ. ಎಂದೆಲ್ಲಾ ಅವರ ಪರವಾಗಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಮಿಥಾಲಿಯನ್ನು ಟೀಕಿಸಿದವರನ್ನು ತರಾಟೆಗೆ ತೆಗೆದುಕೊಳ್ಳಲಾಗಿದ್ದು, ‘ನಿಮ್ಮ ಚಿಂತನೆ ಬದಲಿಸಿಕೊಳ್ಳಿ’ ಎಂದು ಟೀಕಾಕಾರರಿಗೆ ಖಾರವಾಗಿ ಪ್ರತಿಕ್ರಿಯೆ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...