alex Certify
ಕನ್ನಡ ದುನಿಯಾ       Mobile App
       

Kannada Duniya

ನಿಗೂಢವಾಗಿ ನಾಪತ್ತೆಯಾದ ಫುಟ್ಬಾಲ್ ಆಟಗಾರರು

ವಿಶ್ವದಾದ್ಯಂತ ಜನರು ಫಿಫಾ ವಿಶ್ವಕಪ್ ಹ್ಯಾಂಗೋವರ್ ನಲ್ಲಿದ್ದಾರೆ. ಈ ಮಧ್ಯೆ ಫುಟ್ಬಾಲ್ ಅಭಿಮಾನಿಗಳು ದುಃಖಪಡುವಂತಹ ಸುದ್ದಿಯೊಂದು ಬಂದಿದೆ. ಥೈಲ್ಯಾಂಡ್ ನ ಅಂಡರ್ -16 ಫುಟ್ಬಾಲ್ ಟೀಂನ ಆಟಗಾರರು ನಾಪತ್ತೆಯಾಗಿದ್ದಾರೆ. ನ್ಯಾಷನಲ್ ಪಾರ್ಕ್ ನಲ್ಲಿರುವ ಗುಹೆಯೊಂದಕ್ಕೆ ಹೋಗಿದ್ದ ಆಟಗಾರರು 2 ದಿನಗಳಿಂದ ಕಾಣಿಸ್ತಿಲ್ಲ.

11 ರಿಂದ 15 ವರ್ಷದ 12 ಆಟಗಾರರು ಸೇರಿದಂತೆ ಕೋಚ್ ಗುಹೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ರಕ್ಷಣಾ ಪಡೆ ಕಳೆದ 2 ದಿನಗಳಿಂದ ಅವ್ರ ಹುಡುಕಾಟ ನಡೆಸುತ್ತಿದೆ. ಶನಿವಾರ ಮಧ್ಯಾಹ್ನದಿಂದಲೇ ಆಟಗಾರರು ನಾಪತ್ತೆಯಾಗಿದ್ದಾರೆ ಎನ್ನಲಾಗ್ತಿದೆ. ಗುಹೆಯ ಪ್ರವೇಶದ್ವಾರದಲ್ಲಿ ಆಟಗಾರರ ಸೈಕಲ್ ಗಳಿವೆ.

ಉತ್ತರದ ಥೈಲ್ಯಾಂಡ್ ಗುಹೆಗಳಿಂದಲೇ ಪ್ರಸಿದ್ಧಿ ಪಡೆದಿದೆ. ದೇಶ-ವಿದೇಶಗಳಿಂದ ಜನರು ಇಲ್ಲಿಗೆ ಬರ್ತಾರೆ. ರಕ್ಷಣಾ ಪಡೆ ನಿರಂತರ ಹುಡುಕಾಟ ನಡೆಸುತ್ತಿದೆ. ಮಳೆಯಿಂದಾಗಿ ರಕ್ಷಣಾ ಕೆಲಸಕ್ಕೆ ಅಡ್ಡಿಯಾಗ್ತಿದೆ. ಕೆಲವು ಕಡೆ ಆಮ್ಲಜನಕದ ಕೊರತೆಯಿದೆ. ದಟ್ಟ ಕತ್ತಲಿದೆ. ಹಾಗಾಗಿ ರಕ್ಷಣೆಗೆ ಅಡ್ಡಿಯಾಗ್ತಿದೆ ಎಂದು ಮೂಲಗಳು ಹೇಳಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...