alex Certify
ಕನ್ನಡ ದುನಿಯಾ       Mobile App
       

Kannada Duniya

ಸಚಿನ್ ಮಗಳು ಸಾರಾಗೆ ಫೋನ್ ಮಾಡಿ ಈತ ಹೇಳ್ತಿದ್ದ ಇಂಥ ಮಾತು

ಟೀಂ ಇಂಡಿಯಾದ ಮಾಜಿ ಆಟಗಾರ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮಗಳು ಸಾರಾ ತೆಂಡೂಲ್ಕರ್ ಗೆ ಕಿರಿಕಿರಿ ನೀಡಿದ ಘಟನೆಯೊಂದು ಬೆಳಕಿಗೆ ಬಂದಿದೆ. ದೇವಕುಮಾರ್ ಮೈತಿ ಹೆಸರಿನ ವ್ಯಕ್ತಿಯೊಬ್ಬ ಸಾರಾ ಫೋನ್ ಗೆ ಪದೇ ಪದೇ ಕರೆ ಮಾಡಿ ಕಿರಿಕಿರಿ ನೀಡುತ್ತಿದ್ದ ಎನ್ನಲಾಗಿದೆ.

ಮದುವೆಯಾಗುವಂತೆ ದೇವಕುಮಾರ್ ಸಾರಾಗೆ ಒತ್ತಾಯ ಮಾಡುತ್ತಿದ್ದನಂತೆ. ಸಚಿನ್ ಕುಟುಂಬ ಮುಂಬೈನ ಬಾಂದ್ರಾದಲ್ಲಿರುವ ಪೊಲೀಸರಿಗೆ ಈ ಬಗ್ಗೆ ದೂರು ನೀಡಿತ್ತು. ಕಾರ್ಯಾಚರಣೆಗಿಳಿದ ಪೊಲೀಸರು ಫೋನ್ ಟವರ್ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿ ದೇವಕುಮಾರ್ ಪಶ್ಚಿಮ ಬಂಗಾಳದ ಮಹಿಸಾಡೋಲ್ ನಿವಾಸಿ ಎನ್ನಲಾಗಿದೆ. ಈತನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ದೇವಕುಮಾರ್ ವೃತ್ತಿಯಲ್ಲಿ ಕಲಾವಿದನಾಗಿದ್ದಾನೆ. ಕೆಲ ದಿನಗಳ ಹಿಂದಷ್ಟೇ ಮುಂಬೈಗೆ ಬಂದಿದ್ದ ದೇವಕುಮಾರ್ ಸಾರಾ ನಂಬರ್ ಪಡೆದಿದ್ದಾನೆ. ಆ ನಂತ್ರ ಸಾರಾಗೆ ಫೋನ್ ಮಾಡಲು ಶುರುಮಾಡಿದ್ದಾನೆ. ಸಾರಾಳನ್ನು ಪ್ರೀತಿ ಮಾಡುತ್ತಿದ್ದು ಮದುವೆಯಾಗ್ತೇನೆಂದು ದೇವಕುಮಾರ್ ಹೇಳಿದ್ದಾನೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...