alex Certify
ಕನ್ನಡ ದುನಿಯಾ       Mobile App
       

Kannada Duniya

ಮೈಕೆಲ್ ಶುಮಾಕರ್ ಫೋಟೋ 7 ಕೋಟಿಗೆ ಸೇಲ್…!

shumakar

ಅಪಘಾತದಲ್ಲಿ ಗಾಯಗೊಂಡು ಹಾಸಿಗೆ ಹಿಡಿದಿದ್ದ ಫಾರ್ಮುಲಾ ವನ್ ಚಾಂಪಿಯನ್ ಮೈಕೆಲ್ ಶುಮಾಕರ್ ಅವರ ಫೋಟೋವನ್ನು ರಹಸ್ಯವಾಗಿ ಕ್ಲಿಕ್ಕಿಸಿ ಬರೋಬ್ಬರಿ 7 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ.

2013 ರಲ್ಲಿ ಅಪಘಾತವೊಂದರಲ್ಲಿ ಗಾಯಗೊಂಡಿದ್ದ ಶುಮಾಕರ್ ಅವರ ಮೆದುಳಿಗೆ ಪೆಟ್ಟುಬಿದ್ದಿತ್ತು. ಗಾಯದ ತೀವ್ರತೆಗೆ ಶುಮಾಕರ್ ಕೋಮಾಗೆ ಹೋಗಿದ್ದರು. 2014 ರಲ್ಲಿ ಅವರಿಗೆ ಪ್ರಜ್ಞೆ ಮರುಕಳಿಸಿತ್ತು. ನಂತರ ಅವರ ಆರೋಗ್ಯದ ಬಗ್ಗೆ ಸರಿಯಾದ ಮಾಹಿತಿ ಲಭ್ಯವಾಗಿರಲಿಲ್ಲ. ಚಿಕಿತ್ಸೆಯ ವಿವರಗಳನ್ನು ಕೂಡ ರಹಸ್ಯವಾಗಿಡಲಾಗಿತ್ತು.

ಇದನ್ನೇ ದುರ್ಬಳಕೆ ಮಾಡಿಕೊಂಡ ಯಾರೋ ಶುಮಾಕರ್ ಫೋಟೋ ತೆಗೆದು ಮಾರಾಟ ಮಾಡಿದ್ದಾರೆ. ಶುಮಾಕರ್ ಅವರ ಪರಿಚಯಸ್ಥರೇ ಕದ್ದುಮುಚ್ಚಿ ಫೋಟೋ ತೆಗೆದು ಮಾರಾಟ ಮಾಡಿದ್ದಾರೆಂದು ಪೊಲೀಸರು ಶಂಕಿಸಿದ್ದಾರೆ. ಇದೇ ಡಿಸೆಂಬರ್ 29 ಕ್ಕೆ ಶುಮಾಕರ್ ಅಪಘಾತಕ್ಕೆ ತುತ್ತಾಗಿ 3 ವರ್ಷ ಕಳೆಯಲಿದೆ.

ಆದ್ರೆ ಅವರ ಕುಟುಂಬದವರು ಮಾತ್ರ ಶುಮಾಕರ್ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಗೌಪ್ಯವಾಗಿಡಲು ನಿರ್ಧರಿಸಿದ್ದಾರೆ. 2014 ರ ಸೆಪ್ಟೆಂಬರ್ ನಲ್ಲಿ ಮೈಕೆಲ್ ಶುಮಾಕರ್ ಅವರನ್ನು ಜಿನೆವಾದ ವೈದ್ಯಕೀಯ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ. ಸದ್ಯ ಅವರು ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆಂದು ಹೇಳಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...