alex Certify
ಕನ್ನಡ ದುನಿಯಾ       Mobile App
       

Kannada Duniya

ಡೆಲ್ಲಿ ಡೇರ್ ಡೇವಿಲ್ಸ್ ಗೆ ಸೇಲಾದ ನೇಪಾಳಿ ಕ್ರಿಕೆಟಿಗ…!

ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಹಲವು ಅನಿರೀಕ್ಷಿತ ಬೆಳವಣಿಗೆಗಳು ನಡೆದಿವೆ. ಕೆಲ ಸ್ಟಾರ್ ಆಟಗಾರರು ಕಳೆದ ಸಾಲಿನಲ್ಲಿ ಪಡೆದ ಹಣಕ್ಕಿಂತ ಕಡಿಮೆ ಹಣ ಪಡೆಯುತ್ತಿದ್ದರೆ, ಮತ್ತೆ ಹಲವರು ಕೊನೆ ಕ್ಷಣದಲ್ಲಿ ಸೇಲ್ ಆಗಿದ್ದಾರೆ.

ಉದಯೋನ್ಮುಖ ಯುವ ಕ್ರಿಕೆಟಿಗರಿಗೆ ಹೆಚ್ಚಿನ ಮನ್ನಣೆ ದೊರೆತಿದ್ದು, ಅಂಡರ್ 19 ತಂಡದ ಆಟಗಾರರು ಮೂಲ ಬೆಲೆಗಿಂತ ಹೆಚ್ಚಿನ ಮೊತ್ತ ಪಡೆದುಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಐಪಿಎಲ್ ನಲ್ಲಿ ನೇಪಾಳಿ ಯುವ ಆಟಗಾರನೊಬ್ಬ ಆಡಲು ಆಯ್ಕೆಯಾಗಿದ್ದು, ನೇಪಾಳದ 17 ವರ್ಷದ ಸಂದೀಪ್ ಲಮಿಚೇನ್ ರನ್ನು ಡೆಲ್ಲಿ ಡೇರ್ ಡೆವಿಲ್ಸ್, ಮೂಲ ಬೆಲೆ 20 ಲಕ್ಷ ರೂ. ಗಳಿಗೆ ಖರೀದಿಸಿದೆ.

ಸಂದೀಪ್ ಲಮಿಚೇನ್ 2016 ರ ಐಸಿಸಿ ಅಂಡರ್ 19 ವಿಶ್ವಕಪ್ ನಲ್ಲಿ ಐರ್ಲೆಂಡ್ ತಂಡದ ವಿರುದ್ದದ ಪಂದ್ಯದಲ್ಲಿ ಹ್ಯಾಟ್ರಿಕ್ ಗಳಿಸಿದ್ದರಲ್ಲದೇ ಈ ಪಂದ್ಯಾವಳಿಯಲ್ಲಿ ಒಟ್ಟು 5 ವಿಕೆಟ್ ಕಬಳಿಸಿದ್ದರು. ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ ಅವರ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿಯನ್ನೂ ಪಡೆದಿರುವ ಸಂದೀಪ್ ಲಮಿಚೇನ್ ಐಪಿಎಲ್ ನಲ್ಲಿ ಯಾವ ರೀತಿ ಕಮಾಲ್ ಮಾಡಲಿದ್ದಾರೆಂಬುದನ್ನು ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...