alex Certify
ಕನ್ನಡ ದುನಿಯಾ       Mobile App
       

Kannada Duniya

ಮೈಕ್ ಡ್ರಾಪ್ ಸೆಲೆಬ್ರೇಷನ್ ಕುರಿತು ಮಾತನಾಡಿದ್ರಾ ಕೊಹ್ಲಿ?

ಎಡ್ಜ್ ಬಾಸ್ಟನ್ ಅಂಗಳದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಮ್ಯಾಚ್ ರೆಫ್ರಿ ಜೆಫ್ ಕ್ರೊವ್ ಹಾಗೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಆದ್ರೆ, ಯಾವ ವಿಷಯದ ಬಗ್ಗೆ ಮಾತನಾಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಮೈಕ್ ಡ್ರಾಪ್ ಸೆಲೆಬ್ರೇಷನ್ ಬಗ್ಗೆ ಚರ್ಚೆ ನಡೆದಿದೆಯಾ ಎಂಬ ಪ್ರಶ್ನೆ ಎದ್ದಿದೆ.

3ನೇ ದಿನದಾಟ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಜೊತೆ ಮಾತನಾಡಿದ ಜೆಫ್ ಕ್ರೊವ್, ಭಾವನೆಗಳನ್ನ ಕಂಟ್ರೋಲ್ ಮಾಡಿಕೊಂಡು ಆಟ ಆಡುವಂತೆ ಸೂಚಿಸಿದ್ದಾರೆ. ರೂಟ್ ಗೆ ವಿರಾಟ್ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ ಎನ್ನಲಾಗ್ತಿದೆ.

ಎಸ್, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮೊದಲ ಇನ್ನಿಂಗ್ಸ್ ನಲ್ಲಿ ಜೋ ರೂಟ್ ಔಟ್ ಆಗುತ್ತಿದ್ದಂತೆ ಮೈಕ್ ಡ್ರಾಪ್ ಸೆಲೆಬ್ರೇಷನ್ ಮಾಡಿದ್ರು. ಜಾನಿ ಬೇರ್ ಸ್ಟ್ರೋ ಅಶ್ವಿನ್ ಎಸೆತದಲ್ಲಿ ಲಾಂಗ್ ಅನ್ ನಲ್ಲಿ ಚೆಂಡನ್ನು ತಳ್ಳಿ ಎರಡು ರನ್ ಕದಿಯಲು ಮುಂದಾದ್ರು. ಆದ್ರೆ, ವಿರಾಟ್ ಚುರುಕಿನ ರಕ್ಷಣೆ ಮಾಡಿ, ಜೋ ರೂಟ್ ರನ್ನು ಪೆವಿಲಿಯನ್ ಗೆ ಕಳಿಸಿದ್ರು. ರೂಟ್ ಔಟ್ ಆಗುತ್ತಿದ್ದಂತೆ ವಿರಾಟ್ ಮೈಕ್ ಡ್ರಾಪ್ ಸೆಲೆಬ್ರೇಷನ್ ಮಾಡಿ ರೂಟ್ ಕಾಲೆಳೆದ್ರು.

ಅಸಲಿಗೆ ಈ ಸೆಲೆಬ್ರೇಷನ್ ರುವಾರಿ ರೂಟ್. ಭಾರತ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ರೂಟ್, ಶತಕ ಬಾರಿಸುತ್ತಿದ್ದಂತೆ ಬ್ಯಾಟ್ ಕೆಳಗೆ ಬಿಟ್ಟು ಸಂಭ್ರಮಿಸಿದ್ದರು. ಇದು ಟೀಮ್ ಇಂಡಿಯಾಗೆ ಮುಂಬರುವ ಟೆಸ್ಟ್ ಸರಣಿಯಲ್ಲಿ ಸವಾಲು ಎಸೆಯಲು ತಾನು ರೆಡಿ ಎಂಬುದನ್ನು ಸೂಚಿಸುವಂತಿತ್ತು. ರೂಟ್ ಮೊದಲ ಇನ್ನಿಂಗ್ಸ್ ನಲ್ಲಿ 80 ರನ್ ಗಳಿಗೆ ಔಟ್ ಆಗುತ್ತಿದ್ದಂತೆ ವಿರಾಟ್, ತಿರುಗೇಟು ನೀಡಿದ್ರು. ಸದ್ಯ ಈ ದೃಶ್ಯಗಳು ಸಾಮಾಜಿಕ ತಾಣಗಳಲ್ಲಿ ಸಕತ್ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...