alex Certify
ಕನ್ನಡ ದುನಿಯಾ       Mobile App
       

Kannada Duniya

ಲೈಂಗಿಕ ಶೋಷಣೆ ಆರೋಪಕ್ಕೊಳಗಾದ ಇನ್ನೊಬ್ಬ ಕ್ರಿಕೆಟರ್

ವಿಶ್ವದಾದ್ಯಂತ ಮೀಟೂ ಅಭಿಯಾನ ವೇಗ ಪಡೆದಿದೆ. ಕಲಾವಿದರಿಂದ ಹಿಡಿದು ಗಣ್ಯ ವ್ಯಕ್ತಿಗಳು, ಕ್ರಿಕೆಟ್ ಆಟಗಾರರವರೆಗೆ ಅನೇಕರ ವಿರುದ್ಧ ಲೈಂಗಿಕ ಶೋಷಣೆ ಆರೋಪ ಹೇಳಿ ಬರ್ತಿದೆ. 1996 ರಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕರಾಗಿದ್ದ ಅರ್ಜುನ್ ರಣತುಂಗಾ ವಿರುದ್ಧ ಲೈಂಗಿಕ ಶೋಷಣೆ ಆರೋಪ ಕೇಳಿ ಬಂದ ಬೆನ್ನಲ್ಲೇ ಈಗ ಇನ್ನೊಬ್ಬ ಆಟಗಾರನ ವಿರುದ್ಧ ದೂರು ಕೇಳಿ ಬಂದಿದೆ.

ಸ್ಟೈಲಿಶ್ ಆಟಗಾರ, ವೇಗಿ ಲಸಿತ್ ಮಲಿಂಗಾ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ಶೋಷಣೆ ಆರೋಪ ಮಾಡಿದ್ದಾರೆ. ಹೆಸರು ಬಹಿರಂಗಪಡಿಸದ ಮಹಿಳೆ, ಮುಂಬೈ ಹೊಟೇಲ್ ನಲ್ಲಿ ನಡೆದ ಘಟನೆಯನ್ನು ಬಹಿರಂಗಪಡಿಸಿದ್ದಾರೆ. ಹಿನ್ನಲೆ ಗಾಯಕಿ ಚಿನ್ಮಯಿ ಶ್ರೀಪಾದ ತಮ್ಮ ಟ್ವೀಟರ್ ಅಕೌಂಟ್ ನಲ್ಲಿ ಮಹಿಳೆ ಹೇಳಿಕೆಯನ್ನು ಟ್ವಿಟ್ ಮಾಡಿದ್ದಾರೆ.

ಚಿನ್ಮಯಿ ಟ್ವಿಟ್ ನಲ್ಲಿ ಮಹಿಳೆ ಹೆಸರನ್ನು ಹೇಳಿಲ್ಲ. ಆಕೆಯ ಹೇಳಿಕೆಯನ್ನು ಟ್ವೀಟ್ ಮಾಡಿದ್ದು, ನಾನು ಹೆಸರು ಹೇಳಲು ಬಯಸುವುದಿಲ್ಲ. ಇದು ಅನೇಕ ವರ್ಷಗಳ ಹಿಂದಿನ ಕಥೆ. ನಾನು ಸ್ನೇಹಿತನ ಜೊತೆ ಮುಂಬೈನ ಒಂದು ಹೊಟೇಲ್ ನಲ್ಲಿದ್ದೆ. ಆಗ ಐಪಿಎಲ್ ನಡೆಯುತ್ತಿತ್ತು. ಅದೇ ಹೊಟೇಲ್ ನಲ್ಲಿ ಆಟಗಾರರು ತಂಗಿದ್ದರು. ಶ್ರೀಲಂಕಾದ ಪ್ರಸಿದ್ಧ ಆಟಗಾರನ ಭೇಟಿಯಾಯ್ತು. ಆತ ನಿನ್ನ ಸ್ನೇಹಿತ ನನ್ನ ರೂಮಿನಲ್ಲಿದ್ದಾರೆ ಎಂದ್ರು. ನಾನು ಅಲ್ಲಿಗೆ ಹೋದೆ. ಆದ್ರೆ ಅಲ್ಲಿ ಸ್ನೇಹಿತನಿರಲಿಲ್ಲ. ನನ್ನನ್ನು ಹಾಸಿಗೆ ಮೇಲೆ ತಳ್ಳಲಾಯ್ತು. ನನ್ನ ಮುಖದ ಹತ್ತಿರ ಆಟಗಾರ ಮುಖ ತಂದ. ನಾನು ತಪ್ಪಿಸಿಕೊಳ್ಳುವ ಯತ್ನ ನಡೆಸಿದೆ ಆದ್ರೆ ಆಗಲಿಲ್ಲ. ನನ್ನ ಮುಖವನ್ನು ಆತ ಬಳಸಿಕೊಂಡಿದ್ದ. ಅಷ್ಟರಲ್ಲಿ ರೂಂ ಕ್ಲೀನ್ ಮಾಡುವವರು ರೂಂ ಬಾಗಿಲು ತಟ್ಟಿದ್ರು. ಈ ವೇಳೆ ಶೌಚಾಲಯಕ್ಕೆ ಹೋಗಿ ಮುಖ ಕ್ಲೀನ್ ಮಾಡಿ ನಾನು ಸಿಬ್ಬಂದಿ ಜೊತೆ ಹೊರಗೆ ಹೋದೆ. ಇದನ್ನು ನಾನು ಹೇಳಿದ್ರೆ ನೀವು ನಂಬೋದಿಲ್ಲ. ನಾನೇ ಆಟಗಾರನ ಜೊತೆ ಹೋಗಿದ್ದೆ ಎಂದುಕೊಳ್ತೀರಿ ಎಂದು ಟ್ವಿಟ್ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...