alex Certify
ಕನ್ನಡ ದುನಿಯಾ       Mobile App
       

Kannada Duniya

ಸಚಿನ್ ಯಶಸ್ಸಿನ ಹಿಂದಿದ್ದರು ರಾಮ್ ಭಂಡಾರಿ

sachin ram bhandariಯಾವುದೇ ಒಬ್ಬ ವ್ಯಕ್ತಿ ಜೀವನದಲ್ಲಿ ಯಶಸ್ಸಿನ ಉತ್ತುಂಗಕ್ಕೇರಿದಾಗ ಅವರನ್ನು ಹಾಡಿ ಹೊಗಳಲಾಗುತ್ತದೆ. ಆದರೆ ಆ ಸಾಧನೆಯ ಶಿಖರವನ್ನೇರಲು ನೆರವಾದವರನ್ನು ಮರೆತು ಬಿಡಲಾಗುತ್ತದೆ. ಹೀಗೆ ಎಲೆಮರೆಯ ಕಾಯಿಯಂತಿರುವರೊಬ್ಬರ ಪರಿಚಯ ಇಲ್ಲಿದೆ.

ಸಚಿನ್ ತೆಂಡೂಲ್ಕರ್ ಕ್ರಿಕೆಟ್ ದಂತಕಥೆಯಾಗಿದ್ದಾರೆ. ಅವರನ್ನು ಕ್ರಿಕೆಟ್ ದೇವರೆಂದೇ ಆರಾಧಿಸಲಾಗುತ್ತದೆ. ಅವರು ನಿವೃತ್ತಿಯಾಗಿದ್ದರೂ ಅವರ ಸಾಧನೆಗಳು ಮಾತ್ರ ಜನಮಾನಸದಲ್ಲಿವೆ. ಸಚಿನ್ ತೆಂಡೂಲ್ಕರ್ ಸಹ ತಮ್ಮ ಈ ಮಟ್ಟಿಗಿನ ಸಾಧನೆಗೆ ಕಾರಣಕರ್ತರಾದವರನ್ನುಸದಾ ಸ್ಮರಿಸಿಕೊಳ್ಳುತ್ತಿರುತ್ತಾರೆ. ಅಂತವರ ಪೈಕಿ ಈ ವ್ಯಕ್ತಿಯೂ ಒಬ್ಬರು.

ಹೌದು, ಅವರೇ ಬ್ಯಾಟ್ ಡಿಸೈನ್ ಮಾಡಿಕೊಡುವ ರಾಮ್ ಭಂಡಾರಿ. ಸಚಿನ್ ರ ಕ್ರಿಕೆಟ್ ಕೆರಿಯರ್ ನಲ್ಲಿ ಅವರು ಸಿಡಿಸಿದ ಸಿಕ್ಸರ್, ಬೌಂಡರಿಗಳ ಹಿಂದೆ ರಾಮ್ ಭಂಡಾರಿಯವರ ಪರಿಶ್ರಮವೂ ಇದೆ. ಸಚಿನ್ ತೆಂಡೂಲ್ಕರ್ ಅವರ ಅಗತ್ಯಕ್ಕೆ ತಕ್ಕಂತೆ ಬ್ಯಾಟ್ ಡಿಸೈನ್ ಮಾಡಿಕೊಟ್ಟಿರುವ ರಾಮ್ ಭಂಡಾರಿ, ಸಚಿನ್ ಒಮ್ಮೆ ಬೆನ್ನು ನೋವಿನಿಂದ ಬಳಲುತ್ತಿದ್ದಾಗ ಅವರ ಬ್ಯಾಟ್ ನ ತೂಕವನ್ನು ಕಡಿಮೆಗೊಳಿಸಿದ್ದರು. ಹೀಗೆ ಸಚಿನ್ ಬ್ಯಾಟಿಂಗ್ ವಿಧಾನದ ಮಾಹಿತಿ ಹೊಂದಿದ್ದ ರಾಮ್ ಭಂಡಾರಿ, ಅದಕ್ಕೆ ತಕ್ಕಂತೆ ಡಿಸೈನ್ ಮಾಡಿಕೊಡುವ ಮೂಲಕ ಯಶಸ್ಸಿನ ರೂವಾರಿಗಳಲ್ಲಿ ಒಬ್ಬರಾಗಿದ್ದು, ಸಚಿನ್ ಕೂಡಾ ಅವರನ್ನು ಇಂದಿಗೂ ಸ್ಮರಿಸಿಕೊಳ್ಳುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...