alex Certify
ಕನ್ನಡ ದುನಿಯಾ       Mobile App
       

Kannada Duniya

ಬೆರಗು ಮೂಡಿಸುವಂತಿದೆ ಈ ಬಾಲಕಿ ಸಾಧನೆ

tajamul 22

ಜಮ್ಮು ಕಾಶ್ಮೀರದ ಕುಗ್ರಾಮವೊಂದರ ಬಾಲಕಿಯೊಬ್ಬಳು ಮಾಡಿದ ಸಾಧನೆ ಬೆರಗು ಮೂಡಿಸುವಂತಿದೆ. 7 ವರ್ಷ ವಯಸ್ಸಿನ ತಜ್ಮುಲ್ ಇಸ್ಲಾಂ ಎಂಬ ಬಾಲಕಿ, ವಿಶ್ವ ಕಿಕ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾಳೆ.

ಈ ಸಾಧನೆ ಮಾಡಿದ ಮೊದಲ ಕಾಶ್ಮೀರಿ ಹುಡುಗಿ ಎಂಬ ಹಿರಿಮೆಗೆ ಪಾತ್ರವಾಗಿದ್ದಾಳೆ. ಜಮ್ಮು ಕಾಶ್ಮೀರದ ಬಂಡೀಪುರ ಜಿಲ್ಲೆಯ ಕುಗ್ರಾಮದ ನಿವಾಸಿಯಾಗಿರುವ ತಜ್ಮುಲ್ ಇಸ್ಲಾಂ, ಕಿಕ್ ಬಾಕ್ಸಿಂಗ್ ನಲ್ಲಿ ನೋಡುಗರನ್ನು ಬೆರಗುಗೊಳಿಸುವಂತೆ ಪ್ರದರ್ಶನ ನೀಡುತ್ತಾಳೆ. ಈಕೆಯ ಮಾರ್ಷಲ್ ಆರ್ಟ್ಸ್ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ನಿರ್ಮಾಣ ಕಂಪನಿಯೊಂದರಲ್ಲಿ ಆಕೆಯ ತಂದೆ ಗುಲಾಮ್ ಮೊಹಮ್ಮದ್ ಲೋನಿ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಮಗಳ ಆಸಕ್ತಿಯನ್ನು ಕಂಡು ತರಬೇತಿ ಕೊಡಿಸಿದ್ದರು.

ಆಸಕ್ತಿಯೊಂದಿಗೆ ಸೂಕ್ತ ತರಬೇತಿಯನ್ನು ಪಡೆದುಕೊಂಡ ತಜ್ಮುಲ್ ಹರಿದ್ವಾರದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕಿಕ್ ಬಾಕ್ಸಿಂಗ್ ನಲ್ಲಿ ಚಿನ್ನದ ಪದಕ ಗಳಿಸಿದ್ದಾಳೆ. ದೆಹಲಿಯಲ್ಲಿ ನಡೆದ ಸ್ಪರ್ಧೆಯಲ್ಲೂ ವಿಜೇತಳಾಗಿದ್ದಾಳೆ. ಇದೀಗ, ವಿಶ್ವ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾಳೆ.

ಈ ಸಾಧನೆ ಮಾಡಿದ ಕಣಿವೆ ರಾಜ್ಯದ ಮೊದಲ ಹೆಣ್ಣುಮಗಳಾಗಿರುವ ತಜ್ಮುಲ್ ಇಸ್ಲಾಂ, ವಿಶ್ವಮಟ್ಟದ ಸ್ಪರ್ಧೆಯಲ್ಲಿಯೂ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಆಕೆಯ ತರಬೇತುದಾರ ಗುಲಾಮ್ ನಬಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...