alex Certify
ಕನ್ನಡ ದುನಿಯಾ       Mobile App
       

Kannada Duniya

ನಮ್ಮನ್ನು ಭಯೋತ್ಪಾದಕರಂತೆ ಬಿಂಬಿಸಲಾಗಿತ್ತು: ಎಂ.ಎಸ್. ಧೋನಿ

MS-Dhoni-22007 ರ ವಿಶ್ವಕಪ್ ಸೋಲಿನ ನಂತರ ನಮ್ಮನ್ನು ಕೊಲೆಗಡುಕರಂತೆ, ಭಯೋತ್ಪಾದಕರಂತೆ ಬಿಂಬಿಸಲಾಗಿತ್ತು ಅಂತಾ ಟೀಂ ಇಂಡಿಯಾ ನಾಯಕ ಎಂ.ಎಸ್. ಧೋನಿ ಹೇಳಿದ್ದಾರೆ.

ತಮ್ಮ ಬದುಕಿನ ಕುರಿತಾದ ‘ಎಂಎಸ್ ಧೋನಿ : ದಿ ಅನ್ ಟೋಲ್ಡ್ ಸ್ಟೋರಿ’ ಸಿನಿಮಾದ ಪ್ರಮೋಷನ್ ಒಂದರಲ್ಲಿ ಮಾತನಾಡಿದ ಅವರು 10 ವರ್ಷ ಹಿಂದಿನ ಘಟನೆಯನ್ನು ನೆನಪಿಸಿಕೊಂಡ್ರು.

2007ರಲ್ಲಿ ವೆಸ್ಟ್ ಇಂಡೀಸ್ ನಲ್ಲಿ ನಡೆದ ವಿಶ್ವಕಪ್ ನಲ್ಲಿ ಭಾರತ ಮೊದಲ ಸುತ್ತಿನಲ್ಲೇ ಸೋತು ಟೂರ್ನಿಯಿಂದ ನಿರ್ಗಮಿಸಿತ್ತು. ಸೋಲಿನ ಬಳಿಕ ನಡೆದ ಘಟನೆಗಳನ್ನು ಧೋನಿ ಮೆಲುಕು ಹಾಕಿದ್ದಾರೆ.

‘ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಾವು ಪೊಲೀಸ್ ವಾಹನದಲ್ಲಿ ತೆರಳಿದೆವು. ನಾನು ವೀರೇಂದ್ರ ಸೆಹ್ವಾಗ್ ಅವರೊಂದಿಗೆ ಕುಳಿತಿದ್ದೆ. ಅದು ಸಂಜೆ ಹೊತ್ತು, ನಾವು 60-70 ಕಿಮೀ ವೇಗದಲ್ಲಿ ತೆರಳುತ್ತಿದ್ವಿ. ಆಗ ಮಾಧ್ಯಮದವರೆಲ್ಲ ನಮ್ಮನ್ನು ಬೆನ್ನಟ್ಟಿ ಬಂದಿದ್ರು. ಕ್ಯಾಮರಾಗಳು ನಮ್ಮನ್ನು ಸುತ್ತುವರಿದಿದ್ವು. ಅದನ್ನೆಲ್ಲ ನೋಡಿದಾಗ ನಾವೇನೋ ದೊಡ್ಡ ಅಪರಾಧ ಮಾಡಿದ್ದೇವೆ, ಬಹುಷಃ ಕೊಲೆ ಮಾಡಿರಬೇಕು ಅಥವಾ ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿಯಾಗಿರಬೇಕು ಎಂಬ ಭಾವನೆ ಬಂದಿತ್ತು’ ಅಂತಾ ಧೋನಿ ಹೇಳಿದ್ದಾರೆ.

ಪೊಲೀಸ್ ಸ್ಟೇಶನ್ ಗೆ ಬಂದ್ಮೇಲೂ ಧೋನಿ ಮತ್ತು ತಂಡದವರು ಸುಮಾರು 20 ನಿಮಿಷ ಜೀಪ್ ನಲ್ಲೇ ಕುಳಿತಿದ್ದರಂತೆ. ಆ ಘಟನೆಯ ನಂತರ ನಾನು ಬದಲಾದೆ, ಕೋಪ, ಭಾವೋದ್ವೇಗಗಳನ್ನೆಲ್ಲ ನಿಯಂತ್ರಿಸುವುದನ್ನು ಕಲಿತೆ ಅಂತಾ ಕೂಲ್ ಕ್ಯಾಪ್ಟನ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...