alex Certify
ಕನ್ನಡ ದುನಿಯಾ       Mobile App
       

Kannada Duniya

ಏಷ್ಯನ್ ಗೇಮ್ಸ್ ನಲ್ಲಿ ಐತಿಹಾಸಿಕ ಪದಕ ಗೆದ್ದ ಆಟಗಾರ ಸ್ಥಿತಿ ಇದು

ಬಡತನ ಮನುಷ್ಯನ ಆಸೆಗಳಿಗೆ ತಣ್ಣೀರೆರಚುತ್ತದೆ. ಸಾಧಿಸುವ ಛಲವಿದ್ರೂ ಹೊಟ್ಟೆ ತುಂಬಿಸಿಕೊಳ್ಳಲು ಜನರು ಕನಸನ್ನು ಬಲಿ ನೀಡ್ತಾರೆ. ಕಿತ್ತು ತಿನ್ನುವ ಬಡತನದ ಮಧ್ಯೆಯೇ ದೇಶದ ಕೀರ್ತಿ ಪತಾಕೆ ಹಾರಿಸಿದ ವ್ಯಕ್ತಿಗಳ ಸಂಖ್ಯೆಯೂ ಕಡಿಮೆಯೇನಿಲ್ಲ. ಏಷ್ಯನ್ ಗೇಮ್ಸ್ ನ ಸೆಪಕ್ ಟಕ್ರಾವ್ ನಲ್ಲಿ ಭಾರತ ಮೊದಲ ಬಾರಿ ಪದಕ ಗೆಲ್ಲಲು ಕಾರಣವಾದ ಆಟಗಾರನ ಸ್ಥಿತಿ ಕೂಡ ಭಿನ್ನವಾಗಿಲ್ಲ. ಹೊಟ್ಟೆ ತುಂಬಿಸಿಕೊಳ್ಳಲು ಸೆಪಕ್ ಟಕ್ರಾವ್ ಆಟಗಾರ ಹರೀಶ್ ಕುಮಾರ್ ಟೀ ಮಾರಾಟಕ್ಕಿಳಿದಿದ್ದಾರೆ.

ಏಷ್ಯನ್ ಗೇಮ್ಸ್ ನಲ್ಲಿ ಪದಕ ಗೆದ್ದ ನಂತ್ರವೂ ಹರೀಶ್ ಪರಿಸ್ಥಿತಿ ಸುಧಾರಿಸಿಲ್ಲ. ಮನೆಯಲ್ಲಿರುವ ಸದಸ್ಯರ ಸಂಖ್ಯೆ ಹೆಚ್ಚು. ದುಡಿಯುವ ಕೈಗಳು ಕಡಿಮೆ. ಹಾಗಾಗಿ ಹರೀಶ್ ತಂದೆ ಜೊತೆ ಟೀ ಮಾರಾಟ ಮಾಡ್ತಾರೆ. ದಿನಕ್ಕೆ ನಾಲ್ಕು ಗಂಟೆ ಅಭ್ಯಾಸ ಮಾಡ್ತಾರಂತೆ. ದೇಶದ ಹೆಸರನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುವ ಹಾಗೂ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಆಸೆ ಹರೀಶ್ ರದ್ದು.

ಹರೀಶ್ 2011ರಲ್ಲಿ ಅಭ್ಯಾಸ ಶುರು ಮಾಡಿದ್ದರಂತೆ. ಅವ್ರ ಕೋಚ್ ಹೇಮ್ರಾಜ್, ಹರೀಶ್ ಟೈರ್ ಜೊತೆ ಆಟವಾಡುವುದನ್ನು ನೋಡಿ ಭಾರತದ ಕ್ರೀಡಾ ಪ್ರಾಧಿಕಾರ ಕಚೇರಿಗೆ ಕರೆದುಕೊಂಡು ಹೋಗಿದ್ದರಂತೆ. ಅಲ್ಲಿಂದ ಹರೀಶ್ ಗೆ ಕಿಟ್ ಹಾಗೂ ಸ್ವಲ್ಪ ಫಂಡ್ ಸಿಗಲು ಶುರುವಾಗಿತ್ತಂತೆ. ಹರೀಶ್ ಸಾಧನೆಗೆ ಬೆನ್ನೆಲುಬಾಗಿರುವ ಕುಟುಂಬಸ್ಥರು ಕೋಚ್ ಗೆ ಧನ್ಯವಾದ ಹೇಳಿದ್ದಾರೆ. ಉತ್ತಮ ಕೆಲಸ ಪಡೆಯಬೇಕೆಂಬ ಆಸೆ ಹರೀಶ್ ಗಿದ್ದು,ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...