alex Certify
ಕನ್ನಡ ದುನಿಯಾ       Mobile App
       

Kannada Duniya

ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ ನಲ್ಲಿ ಚಿನ್ನ ಗೆದ್ದ ಮೇರಿ ಕೋಮ್

ಭಾರತದ ಹೆಮ್ಮೆಯ ಬಾಕ್ಸಿಂಗ್ ಪಟು ಮೇರಿ ಕೋಮ್ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ ನ 48 ಕೆ.ಜಿ. ವಿಭಾಗದ ಫೈನಲ್ ಪಂದ್ಯದಲ್ಲಿ ಉತ್ತರ ಕೊರಿಯಾದ ಹಯಾಂಗ್ ಮಿ ಕಿಮ್ ರನ್ನು ಮಣಿಸುವ ಮೂಲಕ ಐದನೇ ಬಾರಿಗೆ ಚಿನ್ನದ ಪದಕ ಗೆದ್ದ ಕೀರ್ತಿಗೆ ಭಾಜನರಾಗಿದ್ದಾರೆ.

ಮಂಗಳವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಜಪಾನ್ ನ ತ್ಸುಬಾಸಾ ಕೌಮಾರರನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದ ಮೇರಿ ಕೋಮ್ ಇಂದಿನ ಪಂದ್ಯದ ಆರಂಭದಲ್ಲಿ ಆಕ್ರಮಣಕಾರಿ ಆಟವಾಡಿದ್ದು, ಬಳಿಕ 5-0 ಅಂತರದಿಂದ ವಿಜೇತರಾಗಿದ್ದಾರೆ.

ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ ನಲ್ಲಿ ಒಟ್ಟು ಆರು ಬಾರಿ ಪದಕ ಗಳಿಸಿರುವ ಮೇರಿ ಕೋಮ್ ಈ ಪೈಕಿ 5 ಬಾರಿ ಚಿನ್ನದ ಪದಕ ಗಳಿಸಿರುವುದು ವಿಶೇಷ. 2008 ರಲ್ಲಿ ಮೇರಿ ಕೋಮ್ ಬೆಳ್ಳಿ ಪದಕ ಗಳಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...