alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಬಾರಿಯಾದ್ರೂ ಪಾಕ್ ಅಭಿಮಾನಿಗಳ ಆಸೆ ಕೈಗೂಡುತ್ತಾ..?

ind pak

ನಿಮಗೊಂದು ಜಾಹೀರಾತು ನೆನಪಿರಬಹುದು. ವಿಶ್ವಕಪ್ ಕ್ರಿಕೆಟ್ ಸಂದರ್ಭದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ, ಪಾಕಿಸ್ತಾನ ತಂಡಗಳ ನಡುವೆ ಪಂದ್ಯ ನಡೆಯುವಾಗ ಪಾಕಿಸ್ತಾನದ ಅಭಿಮಾನಿಗಳು ತಮ್ಮ ತಂಡ ಗೆದ್ದರೆ, ಪಟಾಕಿ ಸಿಡಿಸಲು ಸಿದ್ಧರಾಗಿರುತ್ತಾರೆ.

ಆದರೆ, ಪಾಕ್ ತಂಡ ಗೆಲ್ಲದ ಕಾರಣ ತಂದಿಟ್ಟುಕೊಂಡಿದ್ದ ಪಟಾಕಿಯನ್ನು ಸಿಡಿಸಲು ಸಾಧ್ಯವಾಗುವುದಿಲ್ಲ. ಯಸ್, ಇದು ‘ಮೌಕಾ ಮೌಕಾ’ ಜಾಹೀರಾತು. ವಿಶ್ವಕಪ್ ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿ ಸಖತ್ ಜನಪ್ರಿಯವಾಗಿದ್ದ ಈ ಜಾಹೀರಾತು ಮತ್ತೆ ಕಾಣಿಸಿಕೊಂಡಿದೆ. ಈಗಾಗಲೇ ಆರಂಭವಾಗಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿದ್ದು, ಇದೇ ಮಾರ್ಚ್ 19ರಂದು ಕೋಲ್ಕತ್ತಾದಲ್ಲಿ ಹೈವೋಲ್ಟೇಜ್ ಮ್ಯಾಚ್ ನಲ್ಲಿ ಸೆಣೆಸಾಡಲಿವೆ. ಇದೀಗ ಮತ್ತೆ ಜಾಹೀರಾತು ಕಾಣಿಸಿಕೊಂಡಿದೆ.

ವಿಶ್ವಕಪ್ ನಲ್ಲಿ ಒಮ್ಮೆಯೂ ಭಾರತದ ವಿರುದ್ಧ ಪಾಕ್ ಗೆದ್ದಿಲ್ಲ. ಇದನ್ನೇ ಹಿನ್ನೆಲೆಯಾಗಿಟ್ಟುಕೊಂಡು ಹೊಸ ಜಾಹೀರಾತು ಸಿದ್ಧಪಡಿಸಲಾಗಿದ್ದು, ಈಗಾಗಲೇ ಪ್ರಸಾರವಾಗುತ್ತಿದೆ. ಅದರಲ್ಲಿ ಪಾಕ್ ಅಭಿಮಾನಿ, ಸಿಕ್ಸರ್ ಬಾರಿಸುವುದನ್ನು ಭಾರತ ತಂಡಕ್ಕೆ ತೋರಿಸಿಕೊಡಿ ಎಂದು ಪಾಕ್ ತಂಡದ ಶಾಹಿದ್ ಅಫ್ರಿದಿಗೆ ಹೇಳುತ್ತಾನೆ. ವಿಡಿಯೋ ಸಂದೇಶ ಕಳುಹಿಸಿ, ನಮ್ಮ ಕಾಲ ಮುಗಿದಂತೆ, ನಮ್ಮ ಮಕ್ಕಳಿಗಾದರೂ ವಿಶ್ವಕಪ್ ನಲ್ಲಿ ಒಂದು ಪಂದ್ಯ ಗೆದ್ದು ಬಿಡಿ ಎಂದು ಹೇಳುವ ದೃಶ್ಯ ಜಾಹೀರಾತಿನಲ್ಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...