alex Certify
ಕನ್ನಡ ದುನಿಯಾ       Mobile App
       

Kannada Duniya

ಮ್ಯಾಚ್ ವೇಳೆ ಕೋಟ್ಯಾಧಿಪತಿ ತೊಡೆ ಮೇಲೆ ಕುಳಿತಿದ್ಲು ಕ್ರಿಕೆಟರ್ ಪತ್ನಿ..!

prior

ಇಂಗ್ಲೆಂಡ್ ನ ಮಾಜಿ ವಿಕೆಟ್ ಕೀಪರ್ ಮ್ಯಾಟ್ ಪ್ರಿಯರ್ ತನ್ನ ಉತ್ತಮ ಆಟದ ಜೊತೆಗೆ ಪತ್ನಿ ಎಮಿಲಿ ವಿಚಾರಕ್ಕೂ ಸುದ್ದಿಯಾಗಿದ್ದರು. ಕೆಲ ವರ್ಷಗಳ ಹಿಂದೆ ಮೈದಾನದಲ್ಲಿ ಮ್ಯಾಟ್ ಪ್ರಿಯರ್ ಆಟವಾಡ್ತಿದ್ದರೆ ಅಲ್ಲಿದ್ದ ಅವರ ಪತ್ನಿ ಎಮಿಲಿ ಕೋಟ್ಯಾಧಿಪತಿಯ ತೊಡೆ ಮೇಲೆ ಕುಳಿತಿದ್ದಳು. ಇದು ಮಾಧ್ಯಮ ಹಾಗೂ ಕ್ರಿಕೆಟ್ ಜಗತ್ತಿನಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ಘಟನೆ ನಡೆದಿರೋದು 2008 ರ ಅಭ್ಯಾಸ ಪಂದ್ಯವೊಂದರಲ್ಲಿ. ಈ ವೇಳೆ ಆಟಗಾರರ ಪತ್ನಿಯರು ಹಾಗೂ ಗರ್ಲ್ ಫ್ರೆಂಡ್ಸ್ ಉಪಸ್ಥಿತರಿದ್ದರು. ಮ್ಯಾಟ್ ಪ್ರಿಯರ್ ವಿಕೆಟ್ ಕೀಪಿಂಗ್ ಮಾಡ್ತಿದ್ದರು. ಈ ವೇಳೆ ದೊಡ್ಡ ಸ್ಕ್ರೀನ್ ನಲ್ಲಿ ಕಂಡ ದೃಶ್ಯ ಎಲ್ಲರನ್ನೂ ದಂಗಾಗುವಂತೆ ಮಾಡಿತ್ತು. ಮ್ಯಾಟ್ ಪ್ರಿಯರ್ ಗರ್ಭಿಣಿ ಪತ್ನಿ ಎಮಿಲಿ ಕೋಟ್ಯಾಧಿಪತಿಯ ತೊಡೆಯ ಮೇಲೆ ಕುಳಿತಿದ್ದಳು.

ಕೋಟ್ಯಾಧಿಪತಿ ಅಲೆನ್ ಸ್ಟೇನ್ಫೋರ್ಡ್ ತೊಡೆ ಮೇಲೆ ಕುಳಿತಿದ್ದ ಎಮಿಲಿ ನಾಚಿಕೊಂಡಿದ್ದಳು. ಎಮಿಲಿ ಮಾತ್ರವಲ್ಲ ಕೆವಿನ್ ಪೀಟರ್ಸನ್ ಮತ್ತು ಅಲಸ್ಟೈರ್ ಕುಕ್ ಪತ್ನಿಯರೂ ಅಲ್ಲಿದ್ದರು. ಘಟನೆ ನಂತ್ರ ಅಲೇನ್, ಕ್ರಿಕೆಟಿಗರ ಕ್ಷಮೆ ಕೋರಿದ್ದರು. ಮಾಧ್ಯಮಗಳಲ್ಲಿ ಸಾಕಷ್ಟು ವರದಿಗಳು ಪ್ರಸಾರವಾಗಿದ್ದವು. ಆದ್ರೆ ಇದ್ಯಾವುದೂ ಪ್ರಿಯರ್ ಹಾಗೂ ಎಮಿಲಿ ಪ್ರೀತಿಗೆ ಅಡ್ಡಿಯಾಗಲಿಲ್ಲ. ಇಬ್ಬರು ಎರಡು ಮಕ್ಕಳೊಂದಿಗೆ ಸುಖವಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...