alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾಮರಾದಲ್ಲಿ ಸೆರೆಯಾಗಿದೆ ಕ್ರಿಕೆಟಿಗರ ಕಳ್ಳಾಟ…!

ಯುಎಇ ನಲ್ಲಿ ನಡೆದ ಅಜ್ಮನ್ ಆಲ್ ಸ್ಟಾರ್ಸ್ ಟಿ-20 ಕ್ರಿಕೆಟ್ ಲೀಗ್ ನಲ್ಲಿ ಕೆಲ ಕ್ರಿಕೆಟಿಗರು ಕಳ್ಳಾಟವಾಡಿರುವುದು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಐಸಿಸಿ ಭ್ರಷ್ಟಾಚಾರ ನಿಗ್ರಹ ದಳ ಈ ಕುರಿತು ತನಿಖೆ ನಡೆಸಲು ಮುಂದಾಗಿದೆ.

ದುಬೈ ಸ್ಟಾರ್ ಹಾಗೂ ಶಾರ್ಜಾ ವಾರಿಯರ್ಸ್ ನಡುವೆ ಪಂದ್ಯ ನಡೆಯುತ್ತಿದ್ದ ವೇಳೆ ಕೆಲ ಆಟಗಾರರು ಉದ್ದೇಶಪೂರ್ವಕವಾಗಿ ಔಟ್ ಆಗಿರುವುದು, ಬೇಕೆಂದೇ ಬಾಲ್ ಬಿಟ್ಟಿರುವುದು ಮೊದಲಾದ ವಿದ್ಯಮಾನಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪಂದ್ಯಾವಳಿಯ ಸಾಚಾತನವನ್ನು ಪ್ರಶ್ನಿಸಿ ಹಲವರು ಸಾಮಾಜಿಕ ಜಾಲತಾಣದಲ್ಲಿ ಅನುಮಾನ ವ್ಯಕ್ತಪಡಿಸಿದ್ದರು.

ಇದೀಗ ಐಸಿಸಿ, ಟೂರ್ನಿಯನ್ನು ರದ್ದುಗೊಳಿಸುವಂತೆ ಯುಎಇ ಕ್ರಿಕೆಟ್ ಬೋರ್ಡ್ ಗೆ ಸೂಚನೆ ನೀಡಿದ್ದು, ಅದರಂತೆ ಪಂದ್ಯಾವಳಿಗಳನ್ನು ಸ್ಥಗಿತಗೊಳಿಸಲಾಗಿದೆ. ಟೂರ್ನಿಯಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿತ್ತಾ ಎಂಬುದನ್ನು ಪರಿಶೀಲಿಸಲು ಐಸಿಸಿ ಭ್ರಷ್ಟಾಚಾರ ನಿಯಂತ್ರಣ ಘಟಕ ತನಿಖೆ ನಡೆಸಲು ಮುಂದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...