alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕಿಸ್ತಾನದಲ್ಲೂ ನಂಬರ್ 1 ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಸದ್ಯ ಕ್ರಿಕೆಟ್ ಲೋಕದ ಅತ್ಯಂತ ಜನಪ್ರಿಯ ಆಟಗಾರ. ಜಗತ್ತಿನಾದ್ಯಂತ ಕೊಹ್ಲಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಕೇವಲ ಬ್ಯಾಟಿಂಗ್ ಮಾತ್ರವಲ್ಲ, ಕೊಹ್ಲಿಯ ಫಿಟ್ನೆಸ್ ಹಾಗೂ ಫ್ಯಾಷನ್ ಸ್ಟ್ಯಾಂಡರ್ಡ್ ಗೂ ಜನ ಮಾರು ಹೋಗಿದ್ದಾರೆ.

ಕೇವಲ ಭಾರತದಲ್ಲಿ ಮಾತ್ರವಲ್ಲ ಪಾಕಿಸ್ತಾನದಲ್ಲೂ ವಿರಾಟ್ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಎಷ್ಟೋ ಬಾರಿ ಪಾಕಿಸ್ತಾನದ ಕ್ರಿಕೆಟ್ ಪ್ರಿಯರು ತಮ್ಮ ದೇಶದ ಆಟಗಾರರನ್ನು ಟೀಕಿಸಿದ್ದಿದೆ, ಕೊಹ್ಲಿಯನ್ನು ನೋಡಿ ಪಾಠ ಕಲಿಯುವಂತೆ ಜಾಲತಾಣಗಳಲ್ಲಿ ಸಲಹೆಯನ್ನೂ ನೀಡಿದ್ದಾರೆ.

ವಿಶೇಷ ಅಂದ್ರೆ ಪಾಕಿಸ್ತಾನದಲ್ಲಿ ಅತಿ ಹೆಚ್ಚು ಫಾಲೋವರ್ ಗಳನ್ನು ಹೊಂದಿರುವ ಕ್ರಿಕೆಟಿಗ ಅಂದ್ರೆ ವಿರಾಟ್ ಕೊಹ್ಲಿ. ಅಲ್ಲಿನ ಆಟಗಾರರನ್ನು ಕೂಡ ಕೊಹ್ಲಿ ಹಿಂದಿಕ್ಕಿದ್ದಾರೆ. ಗೂಗಲ್ ಟ್ರೆಂಡ್ಸ್ ಪ್ರಕಾರ 2016ರ ಡಿಸೆಂಬರ್ 18ರಿಂದ 2017ರ ಡಿಸೆಂಬರ್ 9ರವರೆಗೆ ಪಾಕಿಸ್ತಾನದಲ್ಲಿ ಅತಿ ಹೆಚ್ಚು ಸರ್ಚ್ ಮಾಡಿರೋ ಕ್ರಿಕೆಟಿಗ ಕೊಹ್ಲಿ.

ಪಾಕ್ ನಾಯಕ ಸರ್ಫರಾಜ್ ಅಹ್ಮದ್, ವೇಗಿ ಮೊಹ್ಮದ್ ಅಮೀರ್, ಅಹ್ಮದ್ ಶೆಹಜಾದ್ ರನ್ನೂ ಕೊಹ್ಲಿ ಹಿಂದಿಕ್ಕಿದ್ದಾರೆ. ಇತ್ತೀಚೆಗಷ್ಟೆ ವೈವಾಹಿಕ ಬದುಕಿಗೆ ಕಾಲಿಟ್ಟಿರೋ ವಿರಾಟ್ ಕೊಹ್ಲಿಗೆ ಪಾಕ್ ಆಟಗಾರರು ಕೂಡ ಟ್ವಿಟ್ಟರ್ ನಲ್ಲಿ ಶುಭ ಕೋರಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...