alex Certify
ಕನ್ನಡ ದುನಿಯಾ       Mobile App
       

Kannada Duniya

ಮೈದಾನದಲ್ಲಿ ಜಗಳಕ್ಕಿಳಿದ್ರೆ ಒಂದು ಪಂದ್ಯದಿಂದ ಔಟ್

ಕ್ರಿಕೆಟನ್ನು ಇನ್ನಷ್ಟು ರೋಚಕಗೊಳಿಸುವ ಉದ್ದೇಶದಿಂದ ನಿಯಮದಲ್ಲಿ ಕೆಲ ಬದಲಾವಣೆಗಳನ್ನು ತರಲಾಗ್ತಿದೆ. ಸೆಪ್ಟೆಂಬರ್ 28ರಂದು ನಿಯಮಗಳಲ್ಲಿ ಬದಲಾವಣೆ ತರಲಾಗುವುದು. ಐಸಿಸಿ ಪತ್ರಿಕಾ ಪ್ರಕಟಣೆಯಲ್ಲಿ ನಿಯಮ ಬದಲಾವಣೆ ಬಗ್ಗೆ ಮಾಹಿತಿ ನೀಡಿದೆ.

ಮೈದಾನದಲ್ಲಿ ಆಟಗಾರರ ವರ್ತನೆ ಸರಿಯಾಗಿಲ್ಲದಿರುವುದು ಅನೇಕ ಭಾರಿ ಕಾಣಸಿಗುತ್ತದೆ. ಆಟಗಾರರ ಸ್ಲೆಡಿಂಗ್, ಅಂಪೈರ್ ಗೆ ಒತ್ತಡ ಹೇರುವುದು, ಮೈದಾನದಲ್ಲಿಯೇ ಆಟಗಾರರು ಜಗಳಕ್ಕಿಳಿರುವುದನ್ನು ನಾವು ನೋಡಿದ್ದೇವೆ. ಇದಕ್ಕೆಲ್ಲ ಅಂತ್ಯ ಹಾಡಲು ಐಸಿಸಿ ಮುಂದಾಗಿದೆ. ಕ್ರಿಕೆಟ್ ನಿಯಮದಲ್ಲಿ ಬದಲಾವಣೆ ತರಲು ಮುಂದಾಗಿದೆ. ಮೈದಾನದಲ್ಲಿ ಆಟಗಾರರು ಕಳಪೆಯಾಗಿ ವರ್ತಿಸಿದ್ರೆ ಐದು ರನ್ ಕಟ್ಟಾಗಲಿದೆ. ಹಾಗೆ ಆ ಪಂದ್ಯದಿಂದ ಆಟಗಾರ ಹೊರಗುಳಿಯಲಿದ್ದಾನೆ.

ಈ ಎಲ್ಲ ಬದಲಾವಣೆಯನ್ನು ಕ್ರಿಕೆಟ್ ನಿಯಮ ರಚಿಸುವ ಮೇರಿಲೆಬೋನ್ ಕ್ರಿಕೆಟ್ ಕ್ಲಬ್ ಮಾಡಲಿದೆ. ಮೈದಾನದಲ್ಲಿ ಆಟಗಾರರ ಕಳಪೆ ವರ್ತನೆ ನೋಡಿ ಎಂಸಿಸಿ ನಿಯಮ ರೂಪಿಸಿದೆ. ಮೊದಲ ನಿಯಮದಲ್ಲಿ ಆಟಗಾರ ಅಂಪೈರ್ ಮೇಲೆ ಒತ್ತಡ ಹೇರಲು ಯತ್ನಿಸಿದ್ರೆ ಮೊದಲು ಎಚ್ಚರಿಕೆ ನೀಡಲಾಗುವುದು. ಎರಡನೇ ಬಾರಿಯೂ ಇದು ಪುನರಾವರ್ತನೆಗೊಂಡಲ್ಲಿ ಎದುರಿನ ತಂಡಕ್ಕೆ 5 ರನ್ ಹೆಚ್ಚುವರಿಯಾಗಿ ಸಿಗಲಿದೆ.

ಎರಡನೇ ನಿಯಮದಲ್ಲಿ ಆಟಗಾರ ಉದ್ದೇಶಪೂರ್ವಕವಾಗಿ ಇನ್ನೊಂದು ತಂಡದ ಆಟಗಾರನಿಗೆ ಚೆಂಡು ಎಸೆದ್ರೆ ಎದುರು ತಂಡಕ್ಕೆ 5 ರನ್ ಹೆಚ್ಚುವರಿಯಾಗಿ ಸಿಗಲಿದೆ.

ಮೂರನೇ ನಿಯಮದಂತೆ ಆಟಗಾರ ಅಂಪೈರ್ ಗೆ ಹೆದರಿಸುವ ಯತ್ನ ಮಾಡಿದ್ರೆ, ಉಳಿದ ಆಟಗಾರರಿಗೆ ಅಥವಾ ಅಭಿಮಾನಿಗಳಿಗೆ ಬೆದರಿಸಲು ಮುಂದಾದ್ರೆ ಆ ಆಟಗಾರನ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಆ ಒಂದು ಪಂದ್ಯದಿಂದ ಆಟಗಾರನನ್ನು ಹೊರಗಿಡಲಾಗುವುದು. ಇಷ್ಟೆ ಅಲ್ಲ ಬ್ಯಾಟ್ ಗಾತ್ರ ಹಾಗೂ ರನ್ ಔಟ್ ಬಗ್ಗೆಯೂ ಸಾಕಷ್ಟು ಬದಲಾವಣೆ ತರಲು ಐಸಿಸಿ ಮುಂದಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...