alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ವರ್ಣಕ್ಕೆ ಕೊರಳೊಡ್ಡಿದ ಭಾರತದ ಮಂಜೀತ್…!

ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾ ಕೂಟದಲ್ಲಿ ಭಾರತದ ಅಥ್ಲೀಟ್ ಗಳು ನಿನ್ನೆ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಪುರುಷರ 800 ಮೀಟರ್ ಓಟದ ಸ್ಪರ್ಧೆಯಲ್ಲಿ ಮಂಜೀತ್ ಸಿಂಗ್ ಬಂಗಾರಕ್ಕೆ ಕೊರಳೊಡ್ಡಿದ್ದಾರೆ. ಇನ್ನು ಇದೇ ವಿಭಾಗದಲ್ಲಿ ಜಿನ್ಸನ್ ಬೆಳ್ಳಿ ಪಡೆದು ಬೀಗಿದ್ದಾರೆ.

ಫೈನಲ್ ರೇಸ್ ನಲ್ಲಿ ಗೆಲ್ಲುವ ಫೆವರೀಟ್ ಎನಿಸಿಕೊಂಡಿದ್ದ ಭಾರತೀಯ ಅಥ್ಲೀಟ್ ಗಳು ಅಮೋಘ ಪ್ರದರ್ಶನ ನೀಡಿದ್ದಾರೆ. ಮಂಜೀತ್ 1 ನಿಮಿಷ 46.15 ಸೆಕೆಂಡ್ ಗಳಲ್ಲಿ ಗುರಿ ಮುಟ್ಟಿದ್ರೆ, ಜಿನ್ಸನ್ 1 ನಿಮಿಷ 46.35 ಸೆಕೆಂಡ್ ಗಳಲ್ಲಿ ಗುರಿ ತಲುಪಿ ಕ್ರಮವಾಗಿ ಮೊದಲೆರೆಡು ಸ್ಥಾನ ಪಡೆದಿದ್ದಾರೆ.

1982ರಲ್ಲಿ ದೆಹಲಿಯಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್ ನಲ್ಲಿ ಚಾರ್ಲ್ಸ್ ಬೊರೊಮಿಯೊ 800 ಮೀಟರ್ ಓಟದಲ್ಲಿ ಬಂಗಾರ ಸಾಧನೆಯನ್ನು ಮಾಡಿದ್ದರು. ನಂತರ ಈ ಸಾಧನೆಯನ್ನು ಯಾವ ಅಥ್ಲೀಟ್ ಸಹ ಮಾಡಿರಲಿಲ್ಲ. 36 ವರ್ಷಗಳ ಬಳಿಕ ಭಾರತೀಯ ಅಥ್ಲೀಟ್ ಸ್ವರ್ಣ ಸಾಧನೆ ಮಾಡಿ ಬೀಗಿದ್ದಾರೆ.

800 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾರತ 67 ವರ್ಷಗಳ ಬಳಿಕ ಬಂಗಾರ ಹಾಗೂ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದೆ. 1951ರಲ್ಲಿ ರಂಜಿತ್ ಸಿಂಗ್ ಬಂಗಾರ ಹಾಗೂ ಕುಲ್ವಂತ್ ಸಿಂಗ್ ಬೆಳ್ಳಿ ಪಡೆದು ಬೀಗಿದ್ದರು. ಅದಾದ ಬಳಿಕ 800 ಮೀಟರ್ ಓಟದಲ್ಲಿ ಸ್ವರ್ಣ, ಬೆಳ್ಳಿ ಭಾರತಕ್ಕೆ ಬಂದಿರಲಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...