alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಕೇಟಿಂಗ್ ಸ್ಪರ್ಧೆಯಲ್ಲಿ ನಡೀತು ಇಂತಹ ಘಟನೆ

ಮಂಗಳೂರು: ರಾಜ್ಯಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಸ್ಪರ್ಧಿಗಳು ಹೊಡೆದಾಡಿಕೊಂಡ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಅಶೋಕನಗರದ ಹೊಗೇಬೈಲ್ ಸೇಂಟ್ ಫ್ರಾನ್ಸಿಸ್ ಗ್ರೌಂಡ್ ನಲ್ಲಿ ಬೆಂಗಳೂರಿನ ಅಂಕಿತ್ –ರಾಘವೇಂದ್ರ ಅವರು ಜಗಳವಾಡಿದ್ದಾರೆ. ನವೆಂಬರ್ 26 ರಂದು ಫೈನಲ್ ಹಣಾಹಣಿಯಲ್ಲಿ ಅಂತಿಮ ಸುತ್ತಿನಲ್ಲಿ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದುಕೊಂಡು ಬಿದ್ದಿದ್ದಾರೆ.

ಕೆಳಗೆ ಬಿದ್ದ ಇಬ್ಬರು ಅಲ್ಲೇ ಹೊಡೆದಾಡಿಕೊಂಡಿದ್ದಾರೆ. ಬಳಿಕ ಅಲ್ಲಿದ್ದವರು ಇಬ್ಬರನ್ನೂ ಸಮಾಧಾನಪಡಿಸಿದ್ದಾರೆ. ಕಳೆದ ವರ್ಷವೂ ಇವರಿಬ್ಬರು ಹೊಡೆದಾಡಿಕೊಂಡಿದ್ದು, ಆಯೋಜಕರು ಎಚ್ಚರಿಕೆ ನೀಡಿದ್ದರು.

ನವೆಂಬರ್ 23 ರಿಂದ 27 ರ ವರೆಗೆ ಮಂಗಳೂರಿನಲ್ಲಿ ರಾಜ್ಯಮಟ್ಟದ ಸ್ಕೇಟಿಂಗ್ ಸ್ಪರ್ಧೆ ಆಯೋಜಿಸಿದ್ದು, ನವೆಂಬರ್ 26 ರಂದು 16 ವರ್ಷ ಮೇಲ್ಪಟ್ಟವರ ವಿಭಾಗದ ಸ್ಪರ್ಧೆಯ ವೇಳೆ ಈ ಘಟನೆ ನಡೆದಿದೆ.

ಹಳೆ ದ್ವೇಷದ ಹಿನ್ನಲೆಯಲ್ಲಿ ಇವರಿಬ್ಬರು ಮತ್ತೆ ಗಲಾಟೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಘಟನೆಯ ದೃಶ್ಯಗಳನ್ನು ನೋಡುಗರೊಬ್ಬರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...