alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ವಿರಾಟ್ ಕೊಹ್ಲಿ ಯಶಸ್ಸಿನ ಗುಟ್ಟು….

India's captain Virat Kohli poses for photographs with the trophy after they won their final test cricket match and the series against Sri Lanka in Colombo, September 1, 2015. REUTERS/Dinuka Liyanawatteಭಾರತ ಟೆಸ್ಟ್ ತಂಡದ ಜವಾಬ್ಧಾರಿ ಹೊತ್ತುಕೊಂಡಾಗಿನಿಂದ್ಲೂ ನಾಯಕನಾಗಿ ವಿರಾಟ್ ಕೊಹ್ಲಿ ಯಶಸ್ಸು ಪಡೆದಿದ್ದಾರೆ. ಕಳೆದ 2 ವರ್ಷಗಳಿಂದ ಸಾಕಷ್ಟು ದಾಖಲೆಗಳನ್ನು ನಿರ್ಮಿಸಿದ್ದಾರೆ.

ದಿಟ್ಟ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಮತ್ತು ಪರಿಣಾಮಗಳ ಬಗ್ಗೆ ಯೋಚಿಸದೆ ಅದನ್ನು ಬೆಂಬಲಿಸುವುದೇ ಕೊಹ್ಲಿ ಸಕ್ಸಸ್ ನ ಸೀಕ್ರೆಟ್. ವಿರಾಟ್ ನಾಯಕತ್ವದಲ್ಲಿ ಆಡಿದ 16 ಟೆಸ್ಟ್ ಪಂದ್ಯಗಳ ಪೈಕಿ 9 ರಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಕೇವಲ 2 ಪಂದ್ಯಗಳನ್ನು ಸೋತಿದ್ದು, 5 ಮ್ಯಾಚ್ ಗಳು ಡ್ರಾನಲ್ಲಿ ಅಂತ್ಯವಾಗಿವೆ.

ಸ್ಫೋಟಕ ಬ್ಯಾಟ್ಸ್ ಮನ್ ಕೊಹ್ಲಿ ಇದುವರೆಗೂ ತವರಿನಲ್ಲಿ ಒಂದೇ ಒಂದು ಟೆಸ್ಟನ್ನೂ ಸೋತಿಲ್ಲ. ಟೀಂ ಇಂಡಿಯಾ ಏಕದಿನ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದ ಗುಣಗಳನ್ನು ಕೊಹ್ಲಿ ಮೆಚ್ಚಿಕೊಳ್ತಾರೆ. ನಿರ್ಧಾರ ತೆಗೆದುಕೊಳ್ಳುವುದು ಕಷ್ಟದ ಕೆಲಸ, ಅದಕ್ಕೆ ಧೈರ್ಯ ಬೇಕು. ಇದನ್ನೆಲ್ಲ ಧೋನಿಯನ್ನು ನೋಡಿ ಕಲಿತಿದ್ದೇನೆ ಎನ್ನುತ್ತಾರೆ ಕೊಹ್ಲಿ.

ತಪ್ಪಾಗಿರಲಿ ಸರಿಯಾಗಿರಲಿ ನಿರ್ಧಾರ ತೆಗೆದುಕೊಂಡ ಮೇಲೆ ಹಿಂಜರಿಯದೆ ಅದನ್ನು ಬೆಂಬಲಿಸುವುದೇ ಒಳ್ಳೆ ನಾಯಕನ ಲಕ್ಷಣ ಅನ್ನೋದು ಕೊಹ್ಲಿ ಅಭಿಪ್ರಾಯ. ಭಾರತ ತಂಡದ ನಾಯಕನಾಗಿರುವುದು ಗೌರವದ ವಿಚಾರ, ಬಿಳಿಯ ಸಮವಸ್ತ್ರ ಧರಿಸಿ ಮೈದಾನಕ್ಕಿಳಿಯುವುದು ಹೆಮ್ಮೆ ತರುತ್ತದೆ ಅಂತಾ ಖುಷಿ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...