alex Certify
ಕನ್ನಡ ದುನಿಯಾ       Mobile App
       

Kannada Duniya

ಧೋನಿ 2 ಫ್ಲಾಟ್ ಏಕೆ ಹರಾಜಾಗ್ತಿದೆ ಗೊತ್ತಾ?

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಎರಡು ಫ್ಲಾಟ್ ಗಳನ್ನು ಹರಾಜಿಗಿಡಲಾಗ್ತಿದೆ. ಧೋನಿ ಹೆಸರಿನಲ್ಲಿ ರಾಂಚಿಯಲ್ಲಿರುವ 1100 ಚದರಡಿ ಹಾಗೂ 900 ಚದರಡಿಯ ಎರಡು ಫ್ಲಾಟ್ ಗಳು ಕಮರ್ಷಿಯಲ್.  ರಾಂಚಿಯ ಡೊರಂಡಾದ ಶಿವಂ ಪ್ಲಾಜಾ ಹೆಸರಿನ ಬಿಲ್ಡಿಂಗ್ ನ ಮೊದಲ ಹಾಗೂ ನಾಲ್ಕನೇ ಮಹಡಿಯಲ್ಲಿ ಧೋನಿಯ ಎರಡು ಫ್ಲಾಟ್ ಇದೆ.

ಶಿವಂ ಪ್ಲಾಜಾದ ಬಿಲ್ಡರ್ ದುರ್ಗಾ ಡೆವಲಪರ್ಸ್ ಪ್ರೈವೆಟ್ ಲಿಮಿಟೆಡ್ ಹುಡ್ಕೊಗೆ ಸಾಲ ಮರುಪಾವತಿ ಮಾಡಿಲ್ಲ. ಹಾಗಾಗಿ ಇಡೀ ಕಟ್ಟಡವನ್ನು ಹುಡ್ಕೊ ಹರಾಜಿಗಿಟ್ಟಿದೆ. ಇದು ಮಹೇಂದ್ರ ಸಿಂಗ್ ಧೋನಿ ಮೇಲೂ ಪರಿಣಾಮ ಬೀರ್ತಿದೆ. ಹುಡ್ಕೊ ಶಿವಂ ಪ್ಲಾಜಾ ಹರಾಜಿಗೆ ತಯಾರಿ ನಡೆಸಿದೆ. ಎರಡು ಬಾರಿ ಕಟ್ಟಡದ ಮೌಲ್ಯ ಮಾಪನ ನಡೆದಿದೆ.

ಮಹೇಂದ್ರ ಸಿಂಗ್ ಧೋನಿಗೆ ಸೇರಿದ ಫ್ಲಾಟ್ ನ ಎಲ್ಲ ವ್ಯವಹಾರ ಮುಗಿದಿದೆ. ಹುಡ್ಕೊಗೆ ಕೆಳ ಅಂತಸ್ಥಿನ 3 ಕೋಟಿ ಹಣವನ್ನು ನೀಡಲಾಗಿದೆ. ಹುಡ್ಕೊ ಜೊತೆ ವಿವಾದವಿದೆ ನಿಜ. ಇದು ಧೋನಿ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಧೋನಿ ಹುಡ್ಕೊ ವಿರುದ್ಧ ಕೋರ್ಟ್ ಮೊರೆ ಹೋಗಬಹುದು ಎಂದು ದುರ್ಗಾ ಡೆವಲಪರ್ಸ್ ಮಾಲೀಕ ಹೇಳಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...