alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ರಾವೋ ಹಾಡಿಗೆ ಧೋನಿ ಪುತ್ರಿಯ ಡಾನ್ಸ್

ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿಯಷ್ಟೇ ಅವರ ಮಗಳು ಜೀವಾ ಕೂಡಾ ಪ್ರಸಿದ್ಧಿ ಪಡೆದಿದ್ದಾಳೆ. ಈಗ ಜೀವಾ ಮತ್ತೊಮ್ಮೆ ತನ್ನ ಟ್ಯಾಲೆಂಟ್ ತೋರಿಸಿದ್ದು, ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸದ್ಯ ಐಪಿಎಲ್ ನಲ್ಲಿ ಬ್ಯುಸಿಯಾಗಿರುವ ಎಲ್ಲಾ ಆಟಗಾರರು, ಒಂದು ಬ್ರೇಕ್ ತೆಗೆದುಕೊಂಡು ಮಸ್ತಿ ಮಾಡಿದ್ದಾರೆ. ಅದ್ರಲ್ಲಿ ತಮ್ಮ ಮಕ್ಕಳನ್ನು ಸೇರಿಸಿಕೊಂಡಿದ್ರು. ಈ ಪಾರ್ಟಿಯಲ್ಲಿ ವಿಂಡೀಸ್ ಕ್ರಿಕೆಟಿಗ ಮತ್ತು ಡಿಜೆ ಆಗಿರುವ ಬ್ರಾವೋ, ಅವರ ಸುಪ್ರಸಿದ್ಧ ಚಾಂಪಿಯನ್ ಹಾಡು ಹಾಡ್ತಿದ್ರೆ, ಧೋನಿ ಪುತ್ರಿ ಜೀವಾ, ರೈನಾ ಪುತ್ರಿ ಗ್ರೆಸಿಯಾ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.

ಕೆಲದಿನಗಳ ಹಿಂದಷ್ಟೇ ಹಾಲಿವುಡ್ ಹಾಡೊಂದಕ್ಕೆ ಜೀವಾ ಹೆಜ್ಜೆ ಹಾಕಿದ ವಿಡಿಯೋವನ್ನು ಧೋನಿ ಇನ್ಸ್ಟಾಗ್ರಾಂ ನಲ್ಲಿ ಅಪ್ ಡೇಟ್ ಮಾಡಿದ್ರು. ಇದಕ್ಕೂ ಕೂಡಾ ಸಿಕ್ಕಾಪಟ್ಟೆ ಲೈಕ್ಸ್ ಬಂದಿತ್ತು. ಅಲ್ಲದೆ ಜೀವಾ ಹಾಡಿದ ಹಾಡು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...