alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಸಾಕು ನಾಯಿಗಳ ಜೊತೆ ಧೋನಿ

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಪ್ರಾಣಿಗಳೆಂದ್ರೆ ಪಂಚ ಪ್ರಾಣ. ಐಪಿಎಲ್ 11ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ನಂತ್ರ ಧೋನಿ ರಜೆಯನ್ನು ಎಂಜಾಯ್ ಮಾಡ್ತಿದ್ದಾರೆ. ಸಾಕು ನಾಯಿ ಜೊತೆ ಧೋನಿ ಆಟವಾಡ್ತಿರುವ ವಿಡಿಯೋವನ್ನು ಧೋನಿ ಇನ್ಸ್ಟ್ರಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿರುವ ಧೋನಿ ಮಾರ್ನಿಂಗ್ ವಾಕ್ ಗೆ ಹೋಗುವಾಗ ಈ ವಿಡಿಯೋ ಮಾಡಿದ್ದಾರೆ. ಒಂದು ಕೈನಲ್ಲಿ ಕ್ಯಾಮರಾ ಹಿಡಿದು ಸಾಕು ನಾಯಿಯನ್ನು ತೋರಿಸಿದ್ದಾರೆ ಧೋನಿ. ಇದು ನನ್ನ ನೆಚ್ಚಿನ ನಾಯಿ ಸ್ಯಾಮ್. ನಾನು ಇದನ್ನು ಇಷ್ಟಪಡ್ತೇನೆ ಎಂಬ ವಿಷ್ಯ ಸ್ಯಾಮ್ ಗೂ ಗೊತ್ತು. ಇದನ್ನೇ ಬಂಡವಾಳ ಮಾಡಿಕೊಂಡು ಬೇರೆಯವರಿಗೆ ತೊಂದರೆ ಕೊಡುತ್ತಿದೆ ಎಂದು ಧೋನಿ ಬರೆದಿದ್ದಾರೆ.

ಧೋನಿ ಈ ವಿಡಿಯೋಕ್ಕೆ ಮೆಚ್ಚುಗೆ ವ್ಯಕ್ತವಾಗ್ತಿದೆ. ಸುಮಾರು 18 ಲಕ್ಷಕ್ಕೂ ಹೆಚ್ಚು ಬಾರಿ ಈ ವಿಡಿಯೋ ನೋಡಲಾಗಿದೆ. 7ಲಕ್ಷಕ್ಕೂ ಹೆಚ್ಚು ಜನರು ವಿಡಿಯೋವನ್ನು ಲೈಕ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...