alex Certify
ಕನ್ನಡ ದುನಿಯಾ       Mobile App
       

Kannada Duniya

ಹಬ್ಬಕ್ಕೂ ಮೊದಲು ಬೇಸನ್ ಲಾಡಿಗೆ ಜೀವಾ-ಧೋನಿ ಕ್ಯೂಟ್ ಅಟ್ಯಾಕ್

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸದ್ಯ ರಾಂಚಿಯಲ್ಲಿದ್ದಾರೆ. ಕುಟುಂಬದವರು ಹಾಗೂ ಮಗಳು ಜೀವಾ ಜೊತೆ ಧೋನಿ ವಿಶ್ರಾಂತಿ ಸಮಯವನ್ನು ಕಳೆಯುತ್ತಿದ್ದಾರೆ. ಮಗಳು ಜೀವಾ ಜೊತೆ ಕಳೆದಿರುವ ಸುಂದರ ಕ್ಷಣದ ವಿಡಿಯೋವೊಂದನ್ನು ಧೋನಿ ಇನ್ಸ್ಟ್ರಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಧೋನಿ ಜೀವಾ ಜೊತೆ ಲಾಡು ತಿನ್ನುತ್ತಿದ್ದಾರೆ. ಧೋನಿ ಬಾಯಿಯಲ್ಲಿ ಬೇಸನ್ ಲಾಡನ್ನು ಇಟ್ಟುಕೊಂಡಿದ್ದಾರೆ. ಮಗಳು ಜೀವಾ ಈ ಲಾಡನ್ನು ತಿನ್ನುತ್ತಿದ್ದಾಳೆ. ಈ ವಿಡಿಯೋ ತುಂಬಾ ಕ್ಯೂಟ್ ಆಗಿದ್ದು ಅಭಿಮಾನಿಗಳಿಗೆ ಇಷ್ಟವಾಗಿದೆ. ಈವರೆಗೆ 26 ಸಾವಿರದ 500 ಮಂದಿ ಲೈಕ್ ಮಾಡಿದ್ದಾರೆ. 4 ಸಾವಿರಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ.

ಇದಕ್ಕಿಂತ ಮೊದಲು ನಾಯಕ ವಿರಾಟ್ ಕೊಹ್ಲಿ ಜೀವಾ ಜೊತೆಗಿರುವ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದರು. ಇದ್ರಲ್ಲಿ ಜೀವಾ ಹಾಗೂ ಕೊಹ್ಲಿ ಬೆಕ್ಕಿನ ಸೌಂಡ್ ಮಾಡ್ತಾ ಎಂಜಾಯ್ ಮಾಡಿದ್ದರು. ಆಸ್ಟ್ರೇಲಿಯಾ ವಿರುದ್ಧ ಟಿ-20 ಸರಣಿಯನ್ನಾಡಿರುವ ಟೀಂ ಇಂಡಿಯಾ ಸದ್ಯ ವಿಶ್ರಾಂತಿ ಪಡೆಯುತ್ತಿದೆ. ಧೋನಿ ಸೇರಿದಂತೆ ಎಲ್ಲ ಆಟಗಾರರು ದೀಪಾವಳಿ ತಯಾರಿ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...