alex Certify
ಕನ್ನಡ ದುನಿಯಾ       Mobile App
       

Kannada Duniya

ಪಂದ್ಯ ಗೆದ್ದ ಬಳಿಕ ಧೋನಿ ವಿಕೆಟ್ ತೆಗೆದುಕೊಳ್ಳುತ್ತಿದ್ದುದ್ದೇಕೆ ಗೊತ್ತಾ?

ಐಪಿಎಲ್ 11 ನೇ ಅವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ಮ್ಯಾಚ್ ಫಿಕ್ಸಿಂಗ್ ಆರೋಪದ ಹಿನ್ನಲೆಯಲ್ಲಿ ನಿಷೇಧಕ್ಕೊಳಗಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತೆ ಮರಳಿದೆ. ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸಿ ಎಸ್ ಕೆ ತಂಡವನ್ನು ಮತ್ತೊಮ್ಮೆ ಮುನ್ನಡೆಸಲಿದ್ದಾರೆ.

ಆಟಗಾರರ ಆಟದ ಶೈಲಿ, ಹೇರ್ ಸ್ಟೈಲ್ ಸೇರಿದಂತೆ ಹತ್ತು ಹಲವು ಹವ್ಯಾಸಗಳು ಅಭಿಮಾನಿಗಳ ಗಮನ ಸೆಳೆಯುತ್ತಿದ್ದು, ಕೂಲ್ ಕ್ಯಾಪ್ಟನ್ ಆಗಿದ್ದ ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾ ನಾಯಕರಾಗಿದ್ದ ವೇಳೆ ಪಂದ್ಯ ಗೆದ್ದ ಸಂದರ್ಭದಲ್ಲಿ ವಿಕೆಟ್ ಕೈಯ್ಯಲ್ಲಿಡಿದು ಹೋಗುತ್ತಿದ್ದುದ್ದೇಕೆ ಎಂಬುದಕ್ಕೆ ಇಲ್ಲಿದೆ ಉತ್ತರ.

ಭಾರತ ತಂಡದ ಗೆಲುವಿನ ನೆನಪು ಸದಾ ಹಸಿರಾಗಿರಲಿ ಎಂಬ ಕಾರಣದಿಂದ ಧೋನಿ ವಿಕೆಟ್ ಕಲೆಕ್ಟ್ ಮಾಡುತ್ತಿರಬಹುದೆಂದೇ ಎಲ್ಲರೂ ಭಾವಿಸಿದ್ದರು. ಆದರೆ, ಧೋನಿ ವಿಕೆಟ್ ಕಲೆಕ್ಟ್ ಮಾಡುತ್ತಿದ್ದ ಅಸಲಿ ವಿಷಯ ಅದಲ್ಲ, ಬದಲಿಗೆ ತಮ್ಮ ಬಾಲ್ಯದ ಗೆಳೆಯನಿಗೆ ಕೊಡಲು ಎಂದರೆ ನೀವು ನಂಬಲೇಬೇಕು. ಮಹೇಂದ್ರ ಸಿಂಗ್ ಧೋನಿ ಅವರಿಗೆ ತಮ್ಮ ನೇಪಾಳಿ ವಾಚ್ ಮೆನ್ ಅವರ ಪುತ್ರ ಕುಲ್ವಿಂದರ್ ಎಂದರೆ ಬಲು ಇಷ್ಟ. ಇಬ್ಬರೂ, ಒಟ್ಟಿಗೆ ಕ್ರಿಕೆಟ್ ಆಡಿ ಬೆಳೆದವರು.

ಕುಲ್ವಿಂದರ್ ಜೊತೆಗೆ ಧೋನಿ ಈಗಲೂ ಆತ್ಮೀಯತೆ ಹೊಂದಿದ್ದಾರೆ. ಕುಲ್ವಿಂದರ್ ಧೋನಿಯಿಂದ ಬಿಡಿಗಾಸಿನ ನೆರವನ್ನು ಪಡೆಯದೇ, ಮನೆಯೊಂದನ್ನು ನಿರ್ಮಿಸಿದ್ದರು. ಈ ಮನೆಗೆ ಬೇಲಿಯನ್ನು ನಿರ್ಮಿಸಲು ಧೋನಿ ಸ್ಟಂಪ್ ಕಲೆಕ್ಟ್ ಮಾಡಿದ್ದರೆನ್ನಲಾಗಿದೆ. ಆ ಮೂಲಕ ಸ್ನೇಹಿತನಿಗೆ ಮರೆಯಲಾಗದ ಗಿಫ್ಟ್ ಕೊಟ್ಟಿದ್ದಾರೆ. ಜೊತೆಗೆ ಮುಂದಿನ ದಿನಗಳಲ್ಲಿ ಈ ವಿಕೆಟ್ ಗಳನ್ನು ನೋಡಿ ಭಾರತದ ಗೆಲುವಿನ ನೆನಪನ್ನು ಸ್ಮರಿಸಿಕೊಳ್ಳುತ್ತೇನೆ ಎಂದಿದ್ದರು ಧೋನಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...