alex Certify
ಕನ್ನಡ ದುನಿಯಾ       Mobile App
       

Kannada Duniya

WWE ನಲ್ಲಿ ಭಾರತದ ‘ಮಹಾಬಲಿ ಶೇರಾ’ ಆರ್ಭಟ

‘ಮಹಾಬಲಿ ಶೇರಾ’ ಎಂದೇ ಖ್ಯಾತರಾಗಿರುವ ಭಾರತದ ಖ್ಯಾತ ಕುಸ್ತಿ ಪಟು ಅಮನ್ ಪ್ರೀತ್ ಸಿಂಗ್ ಇನ್ನು ಮುಂದೆ WWE ರಿಂಗ್ ನಲ್ಲಿ ಆರ್ಭಟಿಸಲಿದ್ದಾರೆ. ಇದಕ್ಕಾಗಿ ಈಗಾಗಲೇ ತರಬೇತಿಯನ್ನೂ ಪಡೆದುಕೊಂಡಿದ್ದು, ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಮೂಲತಃ ಬಾಡಿ ಬಿಲ್ಡರ್ ಆಗಿದ್ದ ಅಮನ್ ಪ್ರೀತ್ ಸಿಂಗ್, ಬಳಿಕ ಕುಸ್ತಿ ಅಂಗಣಕ್ಕೆ ಪ್ರವೇಶಿಸಿದ್ದರು. ಹಲವು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಖ್ಯಾತರಾಗಿದ್ದರು.

ಇವರ ದೇಹದಾರ್ಢ್ಯತೆ ಕಾರಣಕ್ಕಾಗಿ WWE ಆಯೋಜಕರಿಂದ ಆಹ್ವಾನ ಬಂದಿದ್ದು, ತಮ್ಮ ಅದೃಷ್ಟವನ್ನು ಪರೀಕ್ಷಿಸಲು ಅಮನ್ ಪ್ರೀತ್ ಅಮೆರಿಕಾಕ್ಕೆ ತೆರಳಿದ್ದಾರೆ. WWE ಅಂಗಣದಲ್ಲಿ ಯಶಸ್ಸು ಗಳಿಸುವ ಮೂಲಕ ಭಾರತದ ಹಿರಿಮೆಯನ್ನು ಎತ್ತಿ ಹಿಡಿಯುತ್ತೇನೆ ಎಂದು ಅಮನ್ ಪ್ರೀತ್ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...