alex Certify
ಕನ್ನಡ ದುನಿಯಾ       Mobile App
       

Kannada Duniya

ಧೋನಿ ಅಭಿಮಾನಿಗಳಿಗೆ ನಿರಾಸೆಯ ಸುದ್ದಿ

ma-sd-mad

ಪಲ್ಲೆಕೆಲೆ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಶ್ರೀಲಂಕಾ ವಿರುದ್ಧದ ಏಕದಿನ ಮತ್ತು ಟಿ -20 ಕ್ರಿಕೆಟ್ ಸರಣಿ ಅಗ್ನಿಪರೀಕ್ಷೆಯಾಗಿದೆ.

ಏಕದಿನ ಮತ್ತು ಟಿ -20 ಸರಣಿಯಲ್ಲಿ ಧೋನಿ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡದಿದ್ದರೆ, ಆಯ್ಕೆ ಸಮಿತಿ ಪರ್ಯಾಯ ಆಟಗಾರನನ್ನು ಹುಡುಕಿಕೊಳ್ಳಲಿದೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ. ಪ್ರಸಾದ್ ಈ ಕುರಿತು ಮಾಹಿತಿ ನೀಡಿದ್ದು, ಧೋನಿ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡದಿದ್ದರೆ, ಬೇರೆ ಆಟಗಾರನನ್ನು ಹುಡುಕುವುದು ಅನಿವಾರ್ಯವಾಗಲಿದೆ ಎಂದು ಹೇಳಿದ್ದಾರೆ.

ಆಯ್ಕೆ ಸಮಿತಿಯ ಸಭೆಯಲ್ಲಿ ಧೋನಿ ಅವರನ್ನು ಆಯ್ಕೆ ಮಾಡುವ ಕುರಿತಾಗಿ ಭಾರೀ ಚರ್ಚೆಯೇ ನಡೆಯಿತು. ಧೋನಿಯವರು ಎಲ್ಲಿಯವರೆಗೂ ಉತ್ತಮ ಪ್ರದರ್ಶನ ನೀಡುತ್ತಾರೆಯೋ ಅಲ್ಲಿಯವರೆಗೂ ತಂಡದಲ್ಲಿರುತ್ತಾರೆ ಎಂದು ತಿಳಿಸಿದ್ದಾರೆ.

ಎಲ್ಲಾ ಸರಣಿಗಳಲ್ಲಿಯೂ ಭಾರತ ತಂಡ ಟ್ರೋಫಿಯನ್ನು ಗೆಲ್ಲಬೇಕೆಂಬ ದೃಷ್ಟಿಯಿಂದ ಸಮರ್ಥ ತಂಡವನ್ನು ಆಯ್ಕೆ ಮಾಡಲಾಗುವುದು. ನಮಗೆ ಯಾವುದೇ ವ್ಯಕ್ತಿಯ ಹಿತಕ್ಕಿಂತ ತಂಡದ ಹಿತ ಮುಖ್ಯವಾಗಿದೆ. ಧೋನಿ ಶ್ರೀಲಂಕಾ ವಿರುದ್ಧ ನಡೆಯುವ ಏಕದಿನ ಮತ್ತು ಟಿ -20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೆ ನಮಗೆ ಬೇರೆ ಆಯ್ಕೆ ಅನಿವಾರ್ಯವಾಗಲಿದೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...