alex Certify
ಕನ್ನಡ ದುನಿಯಾ       Mobile App
       

Kannada Duniya

ಧೋನಿ ನಿರ್ಧಾರಕ್ಕೆ ಸಚಿನ್ ಹೇಳಿದ್ದೇನು ಗೊತ್ತಾ..?

sachin-dd

ನವದೆಹಲಿ: ಏಕದಿನ, ಟಿ-20 ಪಂದ್ಯಗಳ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ನಿರ್ಧಾರ ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸಿದೆ.

ಯಶಸ್ವಿ ನಾಯಕನಾಗಿದ್ದ ಧೋನಿ ಭಾರತಕ್ಕೆ ಏಕದಿನ ಹಾಗೂ ಟಿ-20 ವಿಶ್ವಕಪ್ ಗೆದ್ದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಅವರ ನಾಯಕತ್ವದಲ್ಲಿ 199 ಏಕದಿನ ಪಂದ್ಯಗಳನ್ನಾಡಿರುವ ಭಾರತ ಕ್ರಿಕೆಟ್ ತಂಡ 110 ರಲ್ಲಿ ಗೆಲವು ಕಂಡಿದ್ದು, 74 ಪಂದ್ಯಗಳಲ್ಲಿ ಸೋತಿದೆ. 4 ಪಂದ್ಯ ಟೈ ಆಗಿದ್ದು, 11 ಪಂದ್ಯ ಫಲಿತಾಂಶವಿಲ್ಲ.

ಇನ್ನು ಟಿ-20 ಯಲ್ಲಿ 72 ಪಂದ್ಯದ ನಾಯಕತ್ವ ವಹಿಸಿದ್ದ ಧೋನಿ, 41 ರಲ್ಲಿ ಗೆಲುವು ತಂದು ಕೊಟ್ಟಿದ್ದಾರೆ. 28 ಪಂದ್ಯ ಸೋತಿದ್ದು, 1 ಪಂದ್ಯ ಟೈ ಆಗಿದೆ. 2 ಪಂದ್ಯಗಳ ಫಲಿತಾಂಶ ಬಂದಿಲ್ಲ.

ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ ನಲ್ಲಿ ನಂಬರ್ ಒನ್ ಸ್ಥಾನಕ್ಕೇರಿತ್ತು.

2007 ರಲ್ಲಿ ಟೀಂ ಇಂಡಿಯಾ ನಾಯಕನಾದ ಧೋನಿ, ಟಿ-20 ವಿಶ್ವಕಪ್, 2011 ರಲ್ಲಿ ಐ.ಸಿ.ಸಿ. ಏಕದಿನ ವಿಶ್ವಕಪ್, 2013 ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದು, ಐ.ಸಿ.ಸಿ.ಯ ಎಲ್ಲಾ ಪ್ರಮುಖ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದ ಏಕೈಕ ನಾಯಕ ಎಂಬ ಶ್ರೇಯಕ್ಕೆ ಪಾತ್ರವಾಗಿದ್ದಾರೆ.

ಧೋನಿ ನಾಯಕತ್ವ ತ್ಯಜಿಸಿದ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಸಚಿನ್ ತೆಂಡೂಲ್ಕರ್, ಧೋನಿಯವರ ನಿರ್ಧಾರವನ್ನು ಗೌರವಿಸಬೇಕಿದೆ. ನಾಯಕನಾಗಿ ಯಶಸ್ವಿ ಪಯಣ ನಡೆಸಿರುವ ಅವರ ಯಶೋಗಾಥೆಯನ್ನು ಹತ್ತಿರದಿಂದ ಕಂಡಿದ್ದೇನೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...