alex Certify
ಕನ್ನಡ ದುನಿಯಾ       Mobile App
       

Kannada Duniya

ಧೋನಿ ಕುರಿತು ಇಂತಹ ಹೇಳಿಕೆ ನೀಡಿದ್ದಾರೆ ರವಿಶಾಸ್ತ್ರಿ

ನವದೆಹಲಿ: ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾದ ಆಸ್ತಿಯಾಗಿದ್ದಾರೆ. ಅವರು ಡ್ರೆಸಿಂಗ್ ರೂಂ ಹಿರಿಯಣ್ಣ ಎಂದು ಪ್ರಧಾನ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

ಇತ್ತೀಚೆಗಷ್ಟೇ ಮುಕ್ತಾಯವಾದ ಶ್ರೀಲಂಕಾ ಪ್ರವಾಸದ ಏಕದಿನ ಸರಣಿಯಲ್ಲಿ ಮಹೇಂದ್ರ ಸಿಂಗ್ ಧೋನಿ ದಾಖಲೆ ಬರೆದಿದ್ದಾರೆ. 100 ಸ್ಟಂಪಿಂಗ್ ವಿಶ್ವದಾಖಲೆ ಬರೆದ ಅವರು, ಬ್ಯಾಟಿಂಗ್ ಮತ್ತು ಕೀಪಿಂಗ್ ನಲ್ಲಿ ಮಿಂಚಿದ್ದರು.

ಧೋನಿಯ ಕುರಿತಾಗಿ ಅಭಿಪ್ರಾಯ ಹಂಚಿಕೊಂಡಿರುವ ರವಿಶಾಸ್ತ್ರಿ, ಅವರು ಶ್ರೇಷ್ಠ ಆಟಗಾರ. ಸುನಿಲ್ ಗವಾಸ್ಕರ್ 36 ನೇ ವಯಸ್ಸಿನಲ್ಲಿ, ಸಚಿನ್ ತೆಂಡೂಲ್ಕರ್ 36 ನೇ ವರ್ಷದಲ್ಲಿ ನಿವೃತ್ತರಾಗಬೇಕೆಂದು ಯಾರೂ ಹೇಳಿರಲಿಲ್ಲ. ಅದು ಪ್ರಸಕ್ತ ಕ್ರಿಕೆಟ್ ಲೋಕದ ಶ್ರೇಷ್ಠ ಬ್ಯಾಟ್ಸ್ ಮನ್ ಮತ್ತು ವಿಕೆಟ್ ಕೀಪರ್ ಆಗಿರುವ ಧೋನಿ ಅವರಿಗೂ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ.

ಟೆಸ್ಟ್ ಕ್ರಿಕೆಟ್ ನಿಂದ ದೂರ ಉಳಿದಿರುವ ಧೋನಿ ಏಕದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರು ಭಾರತ ತಂಡದ ಆಸ್ತಿಯಾಗಿದ್ದಾರೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...