alex Certify
ಕನ್ನಡ ದುನಿಯಾ       Mobile App
       

Kannada Duniya

ಪುಣೆ ಮಾಲೀಕರಿಗೆ ಮಂಗಳಾರತಿ ಮಾಡಿದ ಧೋನಿ ಫ್ಯಾನ್ಸ್

d-fans

ಹೈದರಾಬಾದ್ ನಲ್ಲಿ ನಡೆದ ಐ.ಪಿ.ಎಲ್. ಫೈನಲ್ ನಲ್ಲಿ ಒಂದೇ ಒಂದು ರನ್ ಅಂತರದಿಂದ ಮುಂಬೈ ಇಂಡಿಯನ್ಸ್ ಜಯಗಳಿಸಿತ್ತು. ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಕಳೆದುಕೊಂಡು ನಿರಾಸೆ ಅನುಭವಿಸಿದೆ.

ಈ ಪಂದ್ಯದಲ್ಲಿ ಪುಣೆ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೇವಲ 10 ರನ್ ಗಳಿಸಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು. ಗ್ರೇಟ್ ಮ್ಯಾಚ್ ಫಿನಿಶರ್ ಧೋನಿ ಕಡಿಮೆ ಬಾಲ್ ಗಳಲ್ಲಿ ಹೆಚ್ಚು ರನ್ ಗಳಿಸುವುದರಲ್ಲಿ ಪಂಟರ್.

ಕೊನೆಯ ಓವರ್ ಗಳ ಒತ್ತಡದ ಸಂದರ್ಭದಲ್ಲಿ ಬಿಡುಬೀಸಾಗಿ ಬ್ಯಾಟ್ ಬೀಸುವ ಧೋನಿ ಕಡಿಮೆ ಬಾಲ್ ಗಳಲ್ಲಿ ಬೌಂಡರಿ, ಸಿಕ್ಸರ್ ಬಾರಿಸಿ ಅನೇಕ ಸಲ ತಂಡಕ್ಕೆ ಗೆಲುವು ತಂದಿಕೊಟ್ಟಿದ್ದಾರೆ. ಆದರೆ ಹೈದರಾಬಾದ್ ನಲ್ಲಿ ನಡೆದ ಫೈನಲ್ ನಲ್ಲಿ ಧೋನಿ ಸರಿಯಾಗಿ ಆಡಲಿಲ್ಲ. ಅವರು ತಮ್ಮನ್ನು ಪುಣೆ ತಂಡದ ನಾಯಕನ ಸ್ಥಾನದಿಂದ ತೆಗೆದಿದ್ದಕ್ಕೆ ಹೀಗೆ ಸೇಡು ತೀರಿಸಿಕೊಂಡಿದ್ದಾರೆ ಎಂಬ ಮಾತು ಕೇಳಿಬಂದಿವೆ.

ಇದಕ್ಕೆ ಪೂರಕವಾಗಿ ಪುಣೆ ತಂಡದ ಮಾಲೀಕ ಹರ್ಷ ಗೋಯೆಂಕಾ, ಮುಂಬೈ ಆಟಗಾರರನ್ನು ಹೊಗಳಿ, ಪರೋಕ್ಷವಾಗಿ ಧೋನಿಯನ್ನು ಟೀಕಿಸಿದ್ದಾರೆ. ಇದಕ್ಕೆ ಧೋನಿ ಫ್ಯಾನ್ಸ್ ಪುಣೆ ಮಾಲೀಕರಿಗೆ ಮಂಗಳಾರತಿ ಮಾಡಿದ್ದಾರೆ.

ಎಲ್ಲಾ ಸಂದರ್ಭವೂ ಒಂದೇ ರೀತಿ ಇರುವುದಿಲ್ಲ. ಚಿನ್ನ ಮತ್ತು ಬೆಳ್ಳಿಯನ್ನು ಹೋಲಿಸಲಾಗದು ಎಂದು ಹೇಳಿದ್ದಾರೆ. ಹೀಗೆ ಇನ್ನೂ ಹಲವು ರೀತಿಯಲ್ಲಿ ಹೇಳಿಕೆ ನೀಡುವ ಮೂಲಕ ಗೋಯೆಂಕಾ ಚಳಿ ಬಿಡಿಸಿದ್ದಾರೆ ಧೋನಿ ಫ್ಯಾನ್ಸ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...