alex Certify
ಕನ್ನಡ ದುನಿಯಾ       Mobile App
       

Kannada Duniya

ವಿಚ್ಚೇದನ ಪ್ರಕರಣದಲ್ಲಿ ತಾರಾ ಶಾಹ್ದೇವೋಗೆ ಜಯ

ರಾಷ್ಟ್ರೀಯ ಮಟ್ಟದ ಶೂಟರ್ ತಾರಾ ಶಾಹ್ದೇವೋ ವಿವಾಹ ವಿಚ್ಚೇದನ ಪ್ರಕರಣದಲ್ಲಿ ಕೊನೆಗೂ ಜಯಗಳಿಸಿದ್ದಾರೆ. ರಾಂಚಿ ಕೌಟುಂಬಿಕ ನ್ಯಾಯಾಲಯ ತಾರಾ ಶಾಹ್ದೇವೋ ಮತ್ತು ರಂಜೀತ್ ಸಿಂಗ್ ಕೊಹ್ಲಿ ಯಾನೆ ರಕೀಬುಲ್ ಹಸನ್ ಅವರ ವಿವಾಹವನ್ನ ಅಸಿಂಧುಗೊಳಿಸಿದೆ.

2014ರಲ್ಲಿ ರಂಜೀತ್ ಸಿಂಗ್ ಮತ್ತು ತಾರಾ ಶಾಹ್ದೇವೋ ಮದುವೆಯಾಗಿದ್ದರು. ರಂಜೀತ್ ಸಿಂಗ್ ರನ್ನ ಹಿಂದು ಧರ್ಮೀಯರು ಅಂತ ತಾರಾ ನಂಬಿದ್ದರಂತೆ. ಆದ್ರೆ ಮದುವೆಯಾದ ಮೊದಲ ದಿನವೇ ಅವರು ಹಿಂದು ಅಲ್ಲ ಅನ್ನೋ ಸತ್ಯ ತಾರಾಗೆ ಗೊತ್ತಾಗಿದೆ. ನಂತರದಲ್ಲಿ ರಂಜೀತ್ ಸಿಂಗ್ ಅನ್ಯ ಧರ್ಮಕ್ಕೆ ಮತಾಂತರವಾಗುವಂತೆ ತಾರಾರನ್ನ ಹಿಂಸಿಸಿದರಂತೆ.

ಈ ಬಗ್ಗೆ ನ್ಯಾಯಾಲಯದ ಮೊರೆ ಹೋದ ಅವರು ಪತಿಯ ಮೇಲೆ ಕಿರುಕುಳದ ಆರೋಪವನ್ನ ಮಾಡಿದ್ದರು. ಅಲ್ಲದೇ ಕಳೆದ ವರ್ಷ ವಿಚ್ಚೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆಯನ್ನು ನಡೆಸಿದ ನ್ಯಾಯಾಲಯ ತಾರಾ ಮತ್ತು ರಕೀಬುಲ್ ಹಸನ್ ಗೆ ವಿಚ್ಚೇದನ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...