alex Certify
ಕನ್ನಡ ದುನಿಯಾ       Mobile App
       

Kannada Duniya

ನಾಲ್ಕು ಗಂಟೆಯಲ್ಲಿ 2 ಕೆ.ಜಿ. ತೂಕ ಇಳಿಸಿದ ಮೇರಿಕೋಮ್…!

ನಾಲ್ಕು ಗಂಟೆಯಲ್ಲಿ ಎರಡು ಕೆ.ಜಿ. ತೂಕ ಇಳಿಸೋದು ಸುಲಭದ ವಿಚಾರವಲ್ಲ. ಇದನ್ನು ಕೇಳಿದ್ರೆ ವಿಚಿತ್ರವೆನಿಸದೇ ಇರದು. ನಾಲ್ಕು ಗಂಟೆಯಲ್ಲಿ 2 ಕೆ.ಜಿ. ತೂಕ ಕಡಿಮೆ ಮಾಡಿಕೊಳ್ಳೋದು ಅಸಾಧ್ಯ ಎನ್ನುವವರಿಗೆ ಭಾರತದ ಮಹಿಳಾ ಬಾಕ್ಸರ್ ಮೇರಿ ಕೋಮ್ ಸಾಧ್ಯ ಎಂದು ತೋರಿಸಿದ್ದಾರೆ.

ಪೊಲೆಂಡ್ ನಲ್ಲಿ ನಡೆದ 13ನೇ ಸಿಲೆಸಿಯನ್ ಓಪನ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಭಾರತದ ಮಹಿಳಾ ಬಾಕ್ಸರ್ ಮೇರಿ ಕೋಮ್ ಚಿನ್ನ ಗೆದ್ದಿದ್ದಾರೆ. ಪದಕ ಗೆದ್ದು ಭಾರತಕ್ಕೆ ವಾಪಸ್ ಆದ ಮೇರಿಕೋಮ್ ನಾಲ್ಕು ಗಂಟೆಯಲ್ಲಿ 2 ಕೆ.ಜಿ. ತೂಕ ಇಳಿಸಿಕೊಂಡ ಅದ್ಬುತ, ಆಶ್ಚರ್ಯಕಾರಿ ಸಂಗತಿಯನ್ನು ಎಲ್ಲರ ಮುಂದಿಟ್ಟಿದ್ದಾರೆ.

ಬೆಳಗಿನ ಜಾವ 3 ಗಂಟೆ ಸುಮಾರಿಗೆ ಮೇರಿಕೋಮ್ ಪೊಲೆಂಡ್ ತಲುಪಿದ್ದರಂತೆ. 7.30ಕ್ಕೆ ತೂಕದ ಪರೀಕ್ಷೆ ನಡೆಯಲಿತ್ತಂತೆ. 48 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಮೇರಿಕೋಮ್ ಪಾಲ್ಗೊಳ್ಳಬೇಕಿತ್ತಂತೆ. ಆದ್ರೆ ಮೇರಿಕೋಮ್ ತೂಕ ಇದಕ್ಕಿಂತ 2 ಕೆ.ಜಿ. ಹೆಚ್ಚಿತ್ತಂತೆ. ಉಳಿದ ನಾಲ್ಕು ಗಂಟೆಯಲ್ಲಿ ಮೇರಿಕೋಮ್ 2 ಕೆ.ಜಿ. ತೂಕ ಕಡಿಮೆ ಮಾಡಿಕೊಂಡ್ರಂತೆ. ನಿರಂತರ ಒಂದು ಗಂಟೆಗಳ ಕಾಲ ಸ್ಕಿಪ್ಪಿಂಗ್ ಮಾಡಿದ ಕೋಮ್ ಸ್ಪರ್ಧೆಗೆ ಸಿದ್ಧವಾದ್ರಂತೆ.

ವಿಮಾನ ಖಾಲಿಯಿದ್ದ ಕಾರಣ ಆರಾಮವಾಗಿ ನಿದ್ರೆ ಮಾಡಿದ್ದೆ. ಇದ್ರಿಂದ ಸುಸ್ತಾಗಿರಲಿಲ್ಲ. ಹಾಗಾಗಿ 4 ಗಂಟೆಯಲ್ಲಿ ತೂಕ ಇಳಿಸಿಕೊಂಡು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಯ್ತು ಎಂದಿದ್ದಾರೆ ಮೇರಿಕೋಮ್. ಇನ್ನೆರಡು ತಿಂಗಳಲ್ಲಿ 35ನೇ ವರ್ಷಕ್ಕೆ ಕಾಲಿಡಲಿರುವ ಕೋಮ್, 2020 ರ ಒಲಂಪಿಕ್ಸ್ ನಲ್ಲಿ ಆಡಲಿದ್ದಾರಂತೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...