alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವಿಚಾರದಲ್ಲಿ ಈಗ್ಲೂ ಎಲ್ಲರಿಗಿಂತ ಮುಂದಿದ್ದಾರೆ ಸಚಿನ್

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿ ಅನೇಕ ವರ್ಷ ಕಳೆದಿದ್ದರೂ ಅನೇಕ ದಾಖಲೆಗಳು ಅವ್ರ ಹೆಸರಿನಲ್ಲೇ ಇದೆ. ಭಾರತದ ಪರ 463 ಏಕದಿನ ಪಂದ್ಯಗಳನ್ನಾಡಿರುವ ಸಚಿನ್ ತೆಂಡೂಲ್ಕರ್ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಫೋರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಸಚಿನ್ ಮೊದಲ ಸ್ಥಾನದಲ್ಲಿದ್ದಾರೆ.

2012ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿರುವ ಸಚಿನ್ ತೆಂಡೂಲ್ಕರ್ 2016 ಫೋರ್ ಬಾರಿಸಿದ್ದಾರೆ. ಸಚಿನ್ ನಂತ್ರ ಶ್ರೀಲಂಕಾ ಆಟಗಾರ ಸನತ್ ಜಯಸೂರ್ಯಾ ಎರಡನೇ ಸ್ಥಾನದಲ್ಲಿದ್ದಾರೆ. 433 ಪಂದ್ಯಗಳನ್ನಾಡಿ 1500 ಫೋರ್ ಬಾರಿಸಿದ್ದಾರೆ.

ಕುಮಾರ್ ಸಂಗಕ್ಕಾರ 404 ಪಂದ್ಯಗಳಲ್ಲಿ 1231 ಫೋರ್ ಬಾರಿಸಿ ಮೂರನೇ ಸ್ಥಾನದಲ್ಲಿದ್ದಾರೆ. ರಿಕಿ ಪಾಂಟಿಂಗ್ ನಾಲ್ಕನೇ ಸ್ಥಾನದಲ್ಲಿದ್ದು, ಅವ್ರು 1231 ಫೋರ್ ಬಾರಿಸಿದ್ದಾರೆ. ಕ್ರಿಸ್ ಗೇಲ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದು, ಈವರೆಗೆ 1000 ಫೋರ್ ಗಳಿಸಿದ್ದಾರೆ. ಪಟ್ಟಿಯಲ್ಲಿ ಸೆಹ್ವಾಗ್, ಗಂಗೂಲಿ ಹಾಗೂ ಮಹೇಲಾ ಜಯವರ್ದನೆ ಏಳು, ಎಂಟು ಹಾಗೂ 9ನೇ ಸ್ಥಾನದಲ್ಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...