alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಂಹದ ಬಾಯಿಗೆ ಕೈಕೊಟ್ಟ ರಗ್ಬಿ ಆಟಗಾರ

ಸಿಂಹವನ್ನು ಮುದ್ದು ಮಾಡಲು ಹೋಗಿ ರಗ್ಬಿ ಆಟಗಾರರೊಬ್ಬರು ಅಪಾಯ ತಂದುಕೊಂಡ ಘಟನೆ ದಕ್ಷಿಣ ಆಫ್ರಿಕಾದ ಬ್ಲೋಮ್ ಫಾಂಟೆನ್ ಮೃಗಾಲಯದಲ್ಲಿ ನಡೆದಿದೆ.

ಓಸ್ ಪ್ರೇಯ್ಸ್ ರಗ್ಬಿ ತಂಡದ ಪ್ರಮುಖ ಆಟಗಾರ  ಸ್ಕಾಟ್ ಬಾಲ್ಡ್ ವಿನ್ ಹಾಯಗೊಂಡವರು. ಸ್ನೇಹಿತರೊಂದಿಗೆ ಮೃಗಾಲಯಕ್ಕೆ ತೆರಳಿದ್ದು, ಸಿಂಹಗಳಿದ್ದ ಸ್ಥಳದಲ್ಲಿ ಅವರೆಲ್ಲ ನಿಂತಿದ್ದಾರೆ.

ಸಮೀಪದಲ್ಲೇ ಸಿಂಹಗಳಿದ್ದಾಗ ಬೋನಿನಲ್ಲಿ ಕೈ ಹಾಕಿ ಮುದ್ದು ಮಾಡಿದ್ದಾರೆ. ಕೂಡಲೇ ಅವರ ಕೈ ಕಚ್ಚಿದ ಸಿಂಹ ಜೋರಾಗಿ ಎಳೆದಿದೆ.

ಬಾಲ್ಡ್ ವಿನ್ ಕಿರುಚಾಡಿ ಸಿಂಹದ ಬಾಯಿಯಿಂದ ತಮ್ಮ ಕೈ ಎಳೆದುಕೊಂಡಿದ್ದು, ಸಂಭವಿಸಬಹುದಾಗಿದ್ದ ಭಾರೀ ಅಪಾಯದಿಂದ ಪಾರಾಗಿದ್ದಾರೆ.

ಅವರಿಗೆ ಚಿಕಿತ್ಸೆ ನೀಡಲಾಗಿದೆ. ಕಾಡುಪ್ರಾಣಿಯ ಬಳಿ ದೂರವಿರಬೇಕೆಂಬುದು ಕೂಡ ಅವರಿಗೆ ಗೊತ್ತಿರಲ್ಲಿಲ್ಲ ಎಂದು ತಂಡದ ಕೋಚ್ ಸ್ಟೀವ್ ಟ್ಯಾಂಡಿ ವ್ಯಂಗ್ಯವಾಗಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...