alex Certify
ಕನ್ನಡ ದುನಿಯಾ       Mobile App
       

Kannada Duniya

ವಿರಾಟ್-ಸಚಿನ್ ನಡುವಿನ ಸಾಮ್ಯತೆ ಏನು ಗೊತ್ತಾ…?

ವಿರಾಟ್‍ ಕೊಹ್ಲಿ ವಿಶ್ವ ಕ್ರಿಕೆಟ್ ನಲ್ಲಿ ಮಿನುಗುವ ನಕ್ಷತ್ರ. ತನ್ನ ಕಲಾತ್ಮಕ ಬ್ಯಾಟಿಂಗ್ ನಿಂದಲೇ ಎದುರಾಳಿಗಳ ನಿದ್ದೆಗೆಡಿಸಿರುವ ಪ್ಲೇಯರ್. ವಿರಾಟ್‍ ಟೀಕೆಗಳಿಗೆ ಬ್ಯಾಟ್ ನಿಂದಲೇ ಉತ್ತರ ನೀಡುತ್ತಾರೆ ಎಂಬುದು ಗೊತ್ತೆ ಇದೆ. ಟೀಮ್ ಇಂಡಿಯಾದಲ್ಲಿ ವಿರಾಟ್ ರನ್ನು ಸಚಿನ್ ತೆಂಡೂಲ್ಕರ್ ಉತ್ತರಾಧಿಕಾರಿ ಎಂದೇ ಬಿಂಬಿಸಲಾಗಿದೆ. ಸಚಿನ್ ಹಾಗೂ ವಿರಾಟ್‍ ತಮ್ಮ, ತಮ್ಮ ತಲೆಮಾರಿನ ಸ್ಟಾರ್ ಪ್ಲೇಯರ್ಸ್ ಎಂದ್ರೆ ತಪ್ಪಲ್ಲ.

ವಿರಾಟ್‍ ಕೊಹ್ಲಿ, ಸಚಿನ್ ರ ದಾಖಲೆಗಳ ಬೆನ್ನುಹತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯದ ವಿರಾಟ್ ರ ಫಾರ್ಮ್ ಇದಕ್ಕೆ ಪುಷ್ಠಿ ನೀಡುವಂತಿದೆ. ಸಚಿನ್ ಹಾಗೂ ವಿರಾಟ್ ರಲ್ಲೂ ಕೆಲವು ಸಾಮ್ಯತೆಗಳಿವೆ.

ಹೌದು….ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಇಂಗ್ಲೆಂಡ್ ವಿರುದ್ಧ ತಮ್ಮ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮುಂದುವರೆಸಿದ್ದಾರೆ. ಮೂರನೇ ಟೆಸ್ಟ್ ನಲ್ಲಿ ವಿರಾಟ್ ಕ್ಲಾಸ್ ಬ್ಯಾಟಿಂಗ್ ನಡೆಸಿ ಶತಕ ಬಾರಿಸಿದ್ರು. ಇದು ವಿರಾಟ್ ರ ಅಂತಾರಾಷ್ಟ್ರೀಯ ಕ್ರಿಕೆಟ್‍ ಜೀವನದ 58ನೇ ಶತಕವಾಗಿದೆ. ಸಚಿನ್ ಸಹ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 58ನೇ ಶತಕವನ್ನು ಇಂಗ್ಲೆಂಡ್ ವಿರುದ್ಧ ಸಿಡಿಸಿದ್ದರು.

ವಿರಾಟ್ ನಾಟಿಂಗ್ ಹ್ಯಾಮ್ ನಲ್ಲಿ 197 ಎಸೆತಗಳಲ್ಲಿ 103 ರನ್ ಬಾರಿಸಿದ್ದಾರೆ. ಸಚಿನ್ ಸಹ ತಮ್ಮ 58ನೇ ಶತಕ ಬಾರಿಸಿದಾಗ ಇಷ್ಟೇ ಎಸೆತ ಎದುರಿಸಿ, ಇಷ್ಟೇ ರನ್ ಬಾರಿಸಿದ್ದರು. ಇಂಗ್ಲೆಂಡ್‍ ವಿರುದ್ಧದ ಪಂದ್ಯದಲ್ಲಿ ವಿರಾಟ್ ಟೆಸ್ಟ್ ಕ್ರಿಕೆಟ್ ನಲ್ಲಿ 23ನೇ ಶತಕ ಬಾರಿಸಿದ್ರೆ, ಸಚಿನ್ 27ನೇ ಶತಕ ದಾಖಲಿಸಿದ್ದರು.

ಈ ಇಬ್ಬರು ಸ್ಟಾರ್ ಪ್ಲೇಯರ್ ಗಳು 2011ರ ವಿಶ್ವಕಪ್ ವಿಜೇತ ತಂಡದ ಸದಸ್ಯರು ಎಂಬುದು ಮತ್ತೊಂದು ವಿಶೇಷ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...