alex Certify
ಕನ್ನಡ ದುನಿಯಾ       Mobile App
       

Kannada Duniya

ನಾಯಕತ್ವ ಬದಲಾವಣೆ ಹೇಳಿಕೆಗೆ ಧೋನಿ ಟಾಂಗ್

dhoni kjl

ನವದೆಹಲಿ: ಭಾರತ ಕ್ರಿಕೆಟ್ ತಂಡಕ್ಕೆ ಕೋಚ್ ನೇಮಕ ಮಾಡುವ ಕುರಿತಂತೆ ವ್ಯಾಪಕ ಚರ್ಚೆ ನಡೆದಿರುವಾಗಲೇ ನಾಯಕತ್ವ ಬದಲಾವಣೆ ಬಗ್ಗೆಯೂ ಹಲವರು ಧ್ವನಿ ಎತ್ತಿದ್ದಾರೆ. ಟೆಸ್ಟ್ ಗೆ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ನಾಯಕರಾಗಿದ್ದಾರೆ.

ಏಕದಿನ ಪಂದ್ಯಕ್ಕೆ ಮಹೇಂದ್ರ ಸಿಂಗ್ ಧೋನಿ ನಾಯಕರಾಗಿದ್ದು, ವಿರಾಟ್ ಕೊಹ್ಲಿಗೆ ಏಕದಿನ, ಟಿ-20 ಹಾಗೂ ಟೆಸ್ಟ್ ಮೂರೂ ಮಾದರಿಗೆ ನಾಯಕನನ್ನಾಗಿ ಮಾಡಬೇಕೆಂಬ ಮಾತುಗಳು ಕೇಳಿಬರುತ್ತಿವೆ. ರವಿಶಾಸ್ತ್ರಿ ಸೇರಿದಂತೆ ಹಲವರು ವಿರಾಟ್ ಕೊಹ್ಲಿಗೆ ಮೂರೂ ಮಾದರಿ ಕ್ರಿಕೆಟ್ ತಂಡದ ನಾಯಕನಾಗಿ ನೇಮಿಸಬೇಕೆಂದು ಹೇಳಿದ್ದಾರೆ. ಈ ಕುರಿತಂತೆ, ಟಾಂಗ್ ಕೊಟ್ಟಿರುವ ಧೋನಿ, ಅವರಿವರ ಮಾತಿಗೆಲ್ಲಾ ನಾನು ತಲೆ ಕೆಡಿಸಿಕೊಳ್ಳಲ್ಲ ಎಂದು ಹೇಳಿದ್ದಾರೆ.

ನನ್ನನ್ನು ನಾಯಕತ್ವದಿಂದ ಕೈ ಬಿಡುವುದು ಬಿ.ಸಿ.ಸಿ.ಐ. ಗೆ ಬಿಟ್ಟ ವಿಚಾರ. ನಾನು ಹೊಂದಿರುವ ಅನುಭವ, ನನ್ನ ಅರ್ಹತೆ ಹಾಗೂ ಸಾಧನೆ ಬಗ್ಗೆ ಬಿ.ಸಿ.ಸಿ.ಐ.ಗೆ ಗೊತ್ತಿದೆ. ಬೇರೆಯವರು ಏನು ಹೇಳುತ್ತಾರೆ ಎಂಬುದರ ಬಗ್ಗೆ ನನಗೆ ಚಿಂತೆಯಿಲ್ಲ ಎಂದು ಧೋನಿ ಖಾರವಾಗಿ ಹೇಳಿದ್ದಾರೆ.

ಜೂನ್ 11ರಿಂದ ಜಿಂಬಾಬ್ವೆ ಸರಣಿ ಆರಂಭವಾಗಲಿದ್ದು, 3 ಏಕದಿನ ಹಾಗೂ 3 ಟಿ-20 ಪಂದ್ಯಗಳು ನಡೆಯಲಿವೆ. ಜಿಂಬಾಬ್ವೆ ಸರಣಿಗೆ ಸಂದೀಪ್ ಪಾಟೀಲ್ ನೇತೃತ್ವದ ಆಯ್ಕೆ ಸಮಿತಿ ಯುವ ಆಟಗಾರರನ್ನು ಆಯ್ಕೆ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...