alex Certify
ಕನ್ನಡ ದುನಿಯಾ       Mobile App
       

Kannada Duniya

ಧೋನಿ ಅಂದ್ರೆ ಏನು ಸುಮ್ನೇನಾ…?

ತಂಡಕ್ಕೆ ಯಾರೇ ಬರಲಿ, ಯಾರೇ ಹೋಗಲಿ, ನಾಯಕನಾಗಿರಲಿ ಆಟಗಾರನಾಗಿಯೇ ಇರಲಿ. ಧೋನಿ ಧೋನಿಯೇ. ಇಷ್ಟೆಲ್ಲಾ ಹೊಸ ಮುಖಗಳ ನಡುವೆಯೂ ಕ್ರಿಕೆಟ್ ಪ್ರೇಮಿಗಳು ಇಂದಿಗೂ ಧೋನಿಯನ್ನು ಆರಾಧಿಸುತ್ತಾರೆ.

ಇದೀಗ ನಾಯಕ ಪಟ್ಟದಿಂದ ಕೆಳಗಿಳಿದಾಗಲೂ ಮೈದಾನದಲ್ಲಿ ಧೋನಿ ಖದರ್, ಜನಪ್ರಿಯತೆ ಕಿಂಚಿತ್ತೂ ಕಡಿಮೆಯಾಗಿಲ್ಲ ಎಂಬುದಕ್ಕೆ ಈಗ ನಡೆಯುತ್ತಿರುವ ಏಷ್ಯಾಕಪ್ ನ ಶುಕ್ರವಾರದ ಪಂದ್ಯವೇ ಸಾಕ್ಷಿ.

ಬಾಂಗ್ಲಾದೇಶದ ವಿರುದ್ಧ ನಡೆದ ಈ ಪಂದ್ಯದಲ್ಲಿ ಭಾರತ ಕ್ರಿಕೆಟ್ ನ ದಂತಕತೆ ಬ್ಯಾಟಿಂಗ್ ಗೆ ಇಳಿಯಬೇಕಾದರೆ ಅಕ್ಷರಶಃ ದುಬೈನ ಶೇಕ್ ಗೆ ಸಿಗುವಂತಹ ರಾಜಮರ್ಯಾದೆಯನ್ನು ನೀಡಿದ್ದೇ ಇದಕ್ಕೆ ಸಾಕ್ಷಿ. ತುಂಬಿದ ಕ್ರೀಡಾಂಗಣ ಧೋನಿಯನ್ನು ಸ್ವಾಗತಿಸಬೇಕಾದರೆ ಸ್ಟೇಡಿಯಂನ ರೂಫ್ ಟಾಪ್ ಹಾರಿ ಹೋಗುವುದೋ ಎಂದೇ ಭಾಸವಾಗಿತ್ತು. ಮೈದಾನದಲ್ಲಿ ಅನುಭವೀ ಸಮರಾಶ್ವವೊಂದು ಗಂಭೀರವಾಗಿ ನಡೆದುಕೊಂಡು ಹೋದ ಅನುಭವ. ಪ್ರೇಕ್ಷಕರ ಕರತಾಡನ, ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.

ಹಿಂದಿನ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿ ನಿರಾಸೆಗೊಳಿಸಿದ್ದ ಧೋನಿ, ಈ ಬಾರಿ ಜವಾಬ್ದಾರಿಯುತ ಆಟವಾಡಿ ಪ್ರೇಕ್ಷಕರ ಮನ ತಣಿಸಿದರು. ಆದಾಗಲೇ ಕ್ರೀಸಿನಲ್ಲಿ ಗಟ್ಟಿಯಾಗಿ ತಳವೂರಿದ್ದ ನಾಯಕ ರೋಹಿತ್ ಶರ್ಮಾ ಜೊತೆ 64 ರನ್ ಜೊತೆಯಾಟ ನೀಡಿದರು. ಪಂದ್ಯದಲ್ಲಿ ಧೋನಿ ಗಳಿಸಿದ್ದು ಕೇವಲ 33 ರನ್ನೇ ಆದರೂ ಅದೇ ಧೋನಿ ಸ್ಟೈಲ್, ಸ್ಪೀಡ್ ಇಂದಿಗೂ ಇದೆ ಎಂಬುದು ಅವರು ಬ್ಯಾಟ್ ಬೀಸುವಾಗ ಸ್ಪಷ್ಟವಾಗುತ್ತಿತ್ತು. ಅಂತೂ ಸುಲಭದಲ್ಲಿ ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಪ್ರಮುಖ ಆಕರ್ಷಣೆಯಾದರು ಮಿ. ಪರ್ಫೆಕ್ಟ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...